ಮಾಜಿ ಸಚಿವೆ ಉಮಾಶ್ರೀಗೆ ಟಿಕೆಟ್ ನೀಡುವಂತೆ ನೇಕಾರ ಸಮುದಾಯದ ಒತ್ತಾಯ
ಬೆಂಗಳೂರು, ಎ.10: ವಿಧಾನಸಭಾ ಚುನಾವಣೆಗೆ ಬಾಗಲಕೋಟೆ ಜಿಲ್ಲೆಯ ತೇರದಾಳ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಸಚಿವೆ ಉಮಾಶ್ರೀ ಅವರಿಗೆ ಕಾಂಗ್ರೆಸ್ ಪಕ್ಷವು ಟಿಕೆಟ್ ನೀಡಬೇಕು ಎಂದು ನೇಕಾರ ಸಮುದಾಯದ ಮುಖಂಡರು ಒತ್ತಾಯಿಸಿದ್ದಾರೆ.
ಸೋಮವಾರ ಪ್ರೆಸ್ಕ್ಲಬ್ನಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ನೇಕಾರ ಸಮಾನದ ಮುಖ್ಯಸ್ಥ ನೀಲಕಂಠ ಮುತ್ತೂರ, ಕೆಲವು ಕಾಣದ ಕೈಗಳು ತೇರಬಾಳ ಕ್ಷೇತ್ರದಲ್ಲಿ ಕಾಂಗ್ರೆಸ್ನಿಂದು ಉಮಾಶ್ರೀಗೆ ಸಿಗಬೇಕಾದ ಟಿಕೇಟ್ಅನ್ನು ತಪ್ಪಿಸುತ್ತಿವೆ. ಕಾಂಗ್ರೆಸ್ ಪಕ್ಷವು ಈ ಕುತಂತ್ರಕ್ಕೆ ಬಲಿಯಾಗಬಾರದು. ನೇಕಾರ ಸಮುದಾಯಕ್ಕೆ ಶ್ರಮಿಸಿದ ಉಮಾಶ್ರೀ ಅವರಿಗೆ ಟಿಕೇಟ್ ಅನ್ನು ನೀಡಬೇಕು ಎಂದರು.
ಗೋಷ್ಟಿಯಲ್ಲಿ ನೇಕಾರ ಸಮುದಾಯ ಮುಖಂಡ ಚನ್ನವೀರಪ್ಪ, ಕಿರಣ್ ಕರಲಟ್ಟಿ, ಮಹಾನಿಂಗ ಕಂದಗಲ್ ಮತ್ತಿತರರು ಉಪಸ್ಥಿರರಿದ್ದರು.
Next Story