ಹಿರಿಯಡ್ಕ: 55 ವರ್ಷ ಮೇಲ್ಪಟ್ಟವರಿಗೆ ಎ.14ರಂದು ಉಚಿತ ವೈದ್ಯಕೀಯ ಶಿಬಿರ
ಹಿರಿಯಡ್ಕ, ಎ.12: ರಕ್ತದೊತ್ತಡ, ಮಧುಮೇಹ (ಡಯಾಬಿಟಿಸ್), ಚರ್ಮ, ಕಣ್ಣು, ಕಿವಿ, ಮೂಗು ಗಂಟಲು, ಹಲ್ಲು, ಮೂಳೆ ಸಂಬಂಧಿ ಸಮಸ್ಯೆಗಳನ್ನು ಪರೀಕ್ಷಿಸಲು ಹಾಗೂ ಹಲವು ಉಚಿತ ಚಿಕಿತ್ಸೆಗಳ ಲಾಭವನ್ನು ಒದಗಿಸಲು ವಿಶೇಷವಾಗಿ 55 ವರ್ಷ ಮೇಲ್ಪಟ್ಟ ಹಿರಿಯರಿಗಾಗಿ ಉಚಿತ ವೈದ್ಯಕೀಯ ಶಿಬಿರವನ್ನು ಹಿರಿಯಡ್ಕದ ಶ್ರೀ ವೀರಭದ್ರ ಸಾಂಸ್ಕೃತಿಕ ಕಲಾಕೇಂದ್ರ, ಇಲ್ಲಿನ ದೇವಾಡಿಗ ಭವನದಲ್ಲಿ ಇದೇ ಶುಕ್ರವಾರ ಎ.14ರಂದು ಬೆಳಗ್ಗೆ 9ರಿಂದ ಅಪರಾಹ್ನ 1 ಗಂಟೆಯವರೆಗೆ ಆಯೋಜಿಸಿದೆ.
ಬೆಳಿಗ್ಗೆ 8:30ರಿಂದ ನೊಂದಾವಣಿ ಪ್ರಾರಂಭವಾಗುವುದು. ಹಿರಿಯರು ಹೆಚ್ಚಿನ ಸಂಖ್ಯೆಯಲ್ಲಿ ಇದರ ಲಾಭ ಪಡೆಯಲು ವಿನಂತಿಸಲಾಗಿದೆ. ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆ, ಕಾಲೇಜ್ ಆಫ್ ನರ್ಸಿಂಗ್, ಉಡುಪಿ ಹಿರಿಯ ನಾಗರಿಕರ ಸಂಘ, ರೋಟರಿ ಕ್ಲಬ್ ಮಣಿಪಾಲ ಟೌನ್, ಕರ್ನಾಟಕ ರಾಜ್ಯ ದೇವಾಡಿಗರ ಸಂಘ ಮಂಗಳೂರು, ಹಿರಿಯಡಕ ಶಾಖೆ, ಮೊಗವೀರ ಯುವ ಸಂಘಟನೆ ಉಡುಪಿ ಜಿಲ್ಲೆ, ಹಿರಿಯಡಕ ಶಾಖೆ, ಬಂಟ್ಸ್ ಸಂಘ ಹಿರಿಯಡಕ, ಕೊಟ್ನಕಟ್ಟೆ ಫ್ರೆಂಡ್ಸ್ ಸರ್ಕಲ್, ನವೋದಯ ಫ್ರೆಂಡ್ಸ್ ಕ್ಲಬ್ ಹಿರಿಯಡಕ ಹಾಗೂ ಇತರ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಈ ಶಿಬಿರವನ್ನು ಆಯೋಜಿಸಲಾಗಿದೆ.