ಏಕಾಂಗಿಯಾಗಿ ಬಾವಿ ತೋಡಿದ ಸಾಹಸಿ ಬಾಲಕನಿಗೆ ರಮಾನಾಥ ರೈ ಸನ್ಮಾನ
ಸೃಜನ್ ಪೂಜಾರಿಯ ಸಾಧನೆ ಕುರಿತು "ವಾರ್ತಾಭಾರತಿ" ಡಿಜಿಟಲ್ ಚಾನೆಲ್ ಮಾಡಿದ್ದ ವೀಡಿಯೊ ವರದಿಗೆ ವ್ಯಾಪಕ ಪ್ರಶಂಸೆ

ಮಂಗಳೂರು: ಬಂಟ್ವಾಳ ತಾಲೂಕಿನ ನಾಯಿಲ ಕಾಪಿಕಾಡು ನಿವಾಸಿ ಲೋಕನಾಥ ಮತ್ತು ಮೋಹಿನಿ ದಂಪತಿಯ ಪುತ್ರ ಸೃಜನ್ ಒಬ್ಬನೇ 24 ಅಡಿಯ ಬಾವಿ ತೋಡಿದ ಸಾಹಸಿ ಬಾಲಕನಿಗೆ ಮಾಜಿ ಸಚಿವ ಬಿ.ರಮಾನಾಥ ರೈ ಅವರು ಶಾಲು ಹೊದಿಸಿ, ಫಲಪುಷ್ಪ ನೀಡಿ ಸನ್ಮಾನಿಸಿದರು.
ಯಾರ ನೆರವೂ ಇಲ್ದದೆ, ಏಕಾಂಗಿಯಾಗಿ ಈ ಸಾಧನೆ ಮಾಡಿದ ಈ ಬಾಲಕ ಬಂಟ್ವಾಳ ಮೂಡದ ಸರಕಾರಿ ಕಾಲೇಜಿನ ಪ್ರಥಮ ಪಿಯುಸಿ ಕಾಮರ್ಸ್ ವಿದ್ಯಾರ್ಥಿ.
ಈ ಸಂದರ್ಭದಲ್ಲಿ ರಮಾನಾಥ ರೈ ಅವರ ಬೆಂಬಲಿಗರಾದ ಕೃಷ್ಣಪ್ಪ ಪೂಜಾರಿ ನಾಟಿ, ಆಲ್ಬರ್ಟ್ ಮೆನೆಜಸ್, ರವೀಂದ್ರ ಸಪಲ್ಯ, ಉಮೇಶ್ ಬೋಳಂತೂರು, ಉಮೇಶ್ ನೆಲ್ಲಿಗುಡ್ಡೆ, ಅರುಣ್ ಶೆಟ್ಟಿ, ದಿವಾಕರ್ ಎಲಬೆ, ವಸಂತ ಪೂಜಾರಿ ಕಲ್ಲಗುಡ್ಡೆ, ನಿಖಿಲ್ ಕೋಲ್ಪೆ, ಅನಿಲ್ ಕೋಲ್ಪೆ, ಲಕ್ಷ್ಮಣ ಪೂಜಾರಿ, ಶಿವಪ್ಪ ಮಾಸ್ಟರ್, ಭರತ್ ಎಲಬೆ, ಅಶೋಕ್ ಭಂಡಾರಿಬೆಟ್ಟು ಮತ್ತು ಊರ ನಾಗರಿಕರು ಉಪಸ್ಥಿತರಿದ್ದರು.
ಸೃಜನ್ ಪೂಜಾರಿಯ ಅಸಾಮಾನ್ಯ ಸಾಧನೆ ಕುರಿತು "ವಾರ್ತಾಭಾರತಿ" ಡಿಜಿಟಲ್ ಚಾನೆಲ್ ಮಾಡಿದ್ದ ವಿಶೇಷ ವೀಡಿಯೊ ವರದಿ ಲಕ್ಷಾಂತರ ಜನರಿಗೆ ತಲುಪಿ ವ್ಯಾಪಕ ಪ್ರಶಂಸೆ ವ್ಯಕ್ತವಾಗಿತ್ತು.
.jpeg)