ಬೆಂಗಳೂರು ವಿರುದ್ಧ ಕೋಲ್ಕತಾಕ್ಕೆ 21 ರನ್ ಜಯ

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಬುಧವಾರ ಕೋಲ್ಕತಾ ನೈಟ್ ರೈಡರ್ಸ್ (ಕೆಕೆಆರ್) ತಂಡವು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡವನ್ನು 21 ರನ್ಗಳಿಂದ ಸೋಲಿಸಿದೆ.
ಗೆಲ್ಲಲು 2001 ರನ್ ಗಳಿಸುವ ಗುರಿ ಪಡೆದ ಆರ್ ಸಿಬಿಗೆ ನಿಗದಿತ 20 ಓವರ್ಗಳಲ್ಲಿ 8 ವಿಕೆಟ್ ಗಳನ್ನು ಕಳೆದುಕೊಂಡು 179 ರನ್ಗಳನ್ನಷ್ಟೇ ಗಳಿಸಲು ಸಾಧ್ಯವಾಯಿತು. ಬದಲಿ ನಾಯಕ ವಿರಾಟ್ ಕೊಹ್ಲಿ 37 ಎಸೆತಗಳಲ್ಲಿ 54 ರನ್ ಗಳನ್ನು ಸಿಡಿಸಿದರು ಹಾಗೂ ಅವರು ತಂಡದ ಗರಿಷ್ಠ ಸ್ಟೋರ್ ದಾರರಾದರು.
ಮಹಿಪಾಲ್ ಲೊಟ್ರೊಲ್ 18 ಎಸೆತಗಳಲ್ಲಿ 34 ರನ್ಗಳನ್ನು ಗಳಿಸಿ ದರು. ಬಳಿಕ ದಿನೇಶ್ ಕಾರ್ತಿಕ್ 18 ಎಸೆತಗಳಲ್ಲಿ 22 ರನ್ಗಳನ್ನು ಮಾಡಿದರು. ಮೂರು ವಿಕೆಟ್ಗಳು ಉರುಳಿದ ಬಳಿಕ ಆರ್ ಸಿಬಿ ಗುರಿ ಬೆನ್ನತ್ತುವಿಕೆಯಲ್ಲಿ ಹಿಂದುಳಿಯಿತು. ವರುಣ್ ಚಕ್ರವರ್ತಿ 27 ರನ್ ಗಳನ್ನು ನೀಡಿ 3 ವಿಕೆಟ್ಗಳನ್ನು ಉರುಳಿಸಿದರು. ಸುಯತ್ ಶರ್ಮಾ ಮತ್ತು ಆ್ಯಂಡ್ರಿ ರಸೆಲ್ ತಲಾ 2 ವಿಕೆಟ್ಗಳನ್ನು ಪಡೆದರು.
ಇದಕ್ಕೂ ಮೊದಲು, ಜಾಸನ್ ರಾಯ್ ಮತ್ತು ನಿತೀಶ್ ರಾಣಾ ಅವರ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಕೆಕೆಆರ್ ತಂಡವು ಆರ್ಸಿಬಿ ಗೆಲುವಿಗೆ 201 ರನ್ಗಳ ಗುರಿ ನಿಗದಿಪಡಿಸಿತು.
ಆರಂಭಿಕ ಜಾಸನ್ ರಾಯ್ 29 ಎಸೆತಗಳಲ್ಲಿ 56 ರನ್ಗಳನ್ನು ಸಿಡಿಸಿದರೆ, ನಾಯಕ ನಿತೀಶ್ ರಾಣಾ 21 ಎಸೆತಗಳಲ್ಲಿ 48 ರನ್ಗಳನ್ನು ಗಳಿಸಿದರು. ಅವರ ಬ್ಯಾಟಿಂಗ್ ವೈಭವದಿಂದ ಕೋಲ್ಕತಾಕ್ಕೆ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 200 ರನ್ ಗಳನ್ನು ಕಲೆ ಹಾಕಲು ಸಾಧ್ಯವಾಯಿತು.
ಬೆಂಗಳೂರಿನ ಎಮ್. ಚಿನ್ನಾಸ್ವಾಮಿ ಸ್ಟೇಡಿಯಮ್ನಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ಗೆ ಇಳಿಸಲ್ಪಟ್ಟ ಕೋಲ್ಕತಾ ನೈಟ್ ರೈಡರ್ಸ್ನ ಪರವಾಗಿ ಜಾಸನ್ ಮತ್ತು ಎನ್. ಜಗದೀಶನ್ (29 ಎಸೆತಗಳಲ್ಲಿ 27 ರನ್) ಮೊದಲ ವಿಕೆಟ್ಗೆ 83 ರನ್ ಗಳನ್ನು ಸೇರಿಸಿದರು.
ವೆಂಕಟೇಶ್ ಅಯ್ಯರ್ 26 ಎಸೆತಗಳಲ್ಲಿ 31 ರನ್ಗಳನ್ನು ಗಳಿಸಿದರೆ, ರಿಂಕು ಸಿಂಗ್ 10 ಎಸೆತಗಳಲ್ಲಿ 18 ರನ್ ಗಳನ್ನು ದಾಖಲಿಸಿ ಅಜೇಯರಾಗಿ ಉಳಿದರು. ಇನಿಂಗ್ಸ್ನ ಕೊನೆಯಲ್ಲಿ ಡೇವಿಡ್ ವೈಸ್ 3 ಎಸೆತಗಳಲ್ಲಿ 12 ರನ್ ಗಳನ್ನು ಸಿಡಿಸಿ ತಂಡವು 200ರ ಗಡಿ ತಲುಪುವಂತೆ ನೋಡಿ ಕೊಂಡರು. ಅವರು ಎರಡು ಸಿಕ್ತರ್ಗಳನ್ನು ಸಿಡಿಸಿದರು.
ಬೆಂಗಳೂರು ತಂಡದ ಪರವಾಗಿ ವಂಡು ಹಸರಂಗ ಡಿ ಸಿಲ್ವ (2/24) ಮತ್ತು ವಿಜಯಕುಮಾರ್ ವೈಶಾಖ್ (2/41) ತಲಾ ಎರಡು ವಿಕೆಟ್ಗಳನ್ನು ಉರುಳಿಸಿದರು.