ಕಲ್ಕೂರ ಪ್ರತಿಷ್ಠಾನದಿಂದ ಚುನಾವಣಾ ಜಾಗೃತಿ

ಮಂಗಳೂರು : ನಗರದ ಕಲ್ಕೂರ ಪ್ರತಿಷ್ಠಾನದ ವತಿಯಿಂದ ಪಿವಿಎಸ್ ಸರ್ಕಲ್ ಬಳಿ ಮತದಾನದ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮ ನಡೆಯಿತು.
ವಿವಿಧ ಕ್ಷೇತ್ರದ ಮತದಾನದ ಮಹತ್ವ ಸಾರುವ ಘೋಷಣಾ ಫಲಕಗಳನ್ನು ಪ್ರದರ್ಶಿಸಲಾಯಿತು. ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ, ಕನ್ನಡ ಸಾಹಿತ್ಯ ಪರಿಷತ್ನ ಮಾಜಿ ಅಧ್ಯಕ್ಷ ಡಾ.ಹರಿಕೃಷ್ಣ ಪುನರೂರು, ಎಸ್ಡಿಎಂ ಬಿಬಿಎಂ ಕಾಲೇಜಿನ ನಿವೃತ್ತ ಪ್ರಾಚಾರ್ಯ ಡಾ. ದೇವರಾಜ್, ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ ಮತದಾನದ ಮಹತ್ವದ ಬಗ್ಗೆ ಮಾತನಾಡಿದರು.
ಸಾಹಿತಿ ಪೊಳಲಿ ನಿತ್ಯಾನಂದ ಕಾರಂತ, ಡಾ.ರಾಘವೇಂದ್ರ ಹೊಳ್ಳ, ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ, ಉಪಾಧ್ಯಕ್ಷ ಭಾಸ್ಕರ ರೈ ಕಟ್ಟ, ಸುಧಾಕರ ರಾವ್ ಪೇಜಾವರ, ಜನಾರ್ದನ ಹಂದೆ, ತಾರಾನಾಥ ಹೊಳ್ಳ, ವಿನಯಾನಂದ, ಜಿ.ಕೆ.ಭಟ್ ಸೇರಾಜೆ, ಚಂದ್ರಶೇಖರ ಮಯ್ಯ, ವಿಜಯಲಕ್ಷ್ಮಿಬಿ.ಶೆಟ್ಟಿ, ವಿದುಷಿ ಗೀತಾ ಸರಳಾಯ, ರಶ್ಮಿ ಸರಳಾಯ ಉಪಸ್ಥಿತರಿದ್ದರು.
Next Story