ಉಡುಪಿ: ಮೇ18ರಂದು ವಿದ್ಯುತ್ ವ್ಯತ್ಯಯ

ಉಡುಪಿ, ಮೇ 15: 110/11ಕೆವಿ ಮಧುವನ ಉಪವಿದ್ಯುತ್ ಕೇಂದ್ರದಿಂದ ಹೊರಡುವ 11 ಕೆವಿ ಬಾರ್ಕೂರು ಎಕ್ಸ್‌ಪ್ರೆಸ್ ಫೀಡರ್ ಮಾರ್ಗದಲ್ಲಿ ತುರ್ತು ನಿರ್ವಹಣೆ ಕಾಮಗಾರಿ ಹುಮ್ಮಿಕೊಂಡಿರುವುದರಿಂದ ಹೊಸಾಳ, ಕಚ್ಚೂರು, ರಂಗನಕೆರೆ, ಹೇರಾಡಿ, ಹನೆಹಳ್ಳಿ, ಕೂರಾಡಿ, ನಡೂರು, ಪಡುನೀಲಾವರ, ಬೆಣ್ಣೆಕುದ್ರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹಾಗೂ ಉದ್ಯಾವರ ಎಂ.ಯು.ಎಸ್.ಎಸ್‌ನಿಂದ ಹೊರಡುವ ಬೊಳ್ಜೆ ಮತ್ತು ಮೇಲ್ಪೇಟೆ ಫೀಡರ್‌ನಲ್ಲಿ ತುರ್ತು ನಿರ್ವಹಣೆ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಕೊರಂಗ್ರಪಾಡಿ, ಬೊಳ್ಜೆ, ಕೇದಾರ್, ಕೆಮ್ತೂರು, ಕಟಪಾಡಿ, ಮಠದಂಗಡಿ, ಅಂಕುದ್ರು, ಬೋಳಾರ್ ಗುಡ್ಡೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮೇ 18ರಂದು ಬೆಳಗ್ಗೆ 9:30ರಿಂದ ಸಂಜೆ 5:30ರವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಮೆಸ್ಕಾಂನ ಪ್ರಕಟಣೆ ತಿಳಿಸಿದೆ.
Next Story