ಶ್ರೀಧರ ಪಂಜಾಜೆಗೆ ಕದ್ರಿ ಗುತ್ತು ಪ್ರಶಸ್ತಿ ಪ್ರದಾನ

ಮಂಗಳೂರು, ಮೇ 18: ಕಟೀಲು ಮೇಳದಲ್ಲಿ ನಿರಂತರ 42 ವರ್ಷಗಳಿಂದ ಕಲಾ ಸೇವೆ ಮಾಡುತ್ತಿರುವ ಹಿರಿಯ ಯಕ್ಷಗಾನ ವೇಷಧಾರಿ ಶ್ರೀಧರ ಪಂಜಾಜೆ ಅವರಿಗೆ ಕದ್ರಿ ಕಂಬಳ ಗುತ್ತು ಬಾಲಕೃಷ್ಣ ಶೆಟ್ಟಿ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಬೆಂಗಳೂರಿನ ಡಾ. ಬಿ. ನಿಶಾಕಾಂತ ಶೆಟ್ಟಿ ಅವರ ಶ್ರೀ ಕಟೀಲು ಮೇಳದ ಸೇವೆ ಆಟ ದ ಸಂಧರ್ಭ ಹಿರಿಯ ಹವ್ಯಾಸಿ ತಾಳಮದ್ದಳೆ ಕಲಾವಿದ ಕೀರ್ತಿ ಶೇಷ ಕದ್ರಿ ಕಂಬಳ ಗುತ್ತು ಬಾಲಕೃಷ್ಣ ಶೆಟ್ಟಿ ಸ್ಮರಣಾರ್ಥ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಜರಗಿತು.
ಡಾ. ಸುಧಾಕರ ಮಾರ್ಲ ಅಭಿನಂದನಾ ಭಾಷಣ ಮಾಡಿದರು. ಹಿರಿಯ ವಿದ್ವಾಂಸ ಡಾ. ಎಂ. ಪ್ರಭಾಕರ ಜೋಶಿ , ಪ್ರದೀಪ ಕುಮಾರ್ ಕಲ್ಕೂರ, ಸುರೇಶ ಬಿ. ಶೆಟ್ಟಿ, ಬಿ.ವಿ.ಹೆಗ್ಡೆ ಶಿರಸಿ, ಸುರೇಶ ವಿ. ಹೆಗ್ಡೆ, ಇಂದ್ರಾಳಿ ಶಿವರಾಮ್ ಶೆಟ್ಟಿ, ಬಾಳ ತಿಮ್ಮಪ್ಪಶೆಟ್ಟಿ, ಶಿರ್ವ ಕೋಡು ದಿನೇಶ್ ಹೆಗ್ಡೆ, ಸುಧಾಕರ ರಾವ್ ಪೇಜಾವರ, ಎಲ್ಲೂರು ರಾಮಚಂದ್ರ ಭಟ್, ಚೈತ್ರಾ ಸಾಕೇತ್ ಶೆಟ್ಟಿ ಉಪಸ್ಥಿತರಿದ್ದರು. ಕದ್ರಿ ಕಂಬಳ ಗುತ್ತು ನವನೀತ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
Next Story