ಮೇ 25-28: ‘ದೇವತಾ’ ಆಕ್ರಿಲಿಕ್ ಕಲಾಕೃತಿಗಳ ಪ್ರದರ್ಶನ
ಉಡುಪಿ, ಮೇ 22: ಹಳೆಯ ಕ್ಯಾಲೆಂಡರ್ನಲ್ಲಿ ಮಾತ್ರ ನೋಡಲಿಕ್ಕೆ ಸಿಗುತ್ತಿದ್ದ ದೇವ ದೇವತೆಯರ ಕುರಿತಾಗಿ ರಚಿಸಿದ ಆಕ್ರಿಲಿಕ್ ಕಲಾಕೃತಿಗಳ ಪ್ರದರ್ಶನ ‘ದೇವತಾ’ ಮೇ 25ರಿಂದ ಮೇ 28ರವರೆಗೆ ಕುಂಜಿಬೆಟ್ಟಿನ ಅದಿತಿ ಆರ್ಟ್ ಗ್ಯಾಲರಿಯಲ್ಲಿ ಜರಗಲಿದೆ.
ಗ್ಯಾಲರಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಗ್ಯಾಲರಿಯ ಆಡಳಿತ ವಿಶ್ವಸ್ಥ ಡಾ.ಕಿರಣ್ ಆಚಾರ್ಯ, ಹಿರಿಯ ಕಲಾವಿದರ ಪ್ರೇರಣೆ ಪಡೆದ ಪ್ರವೀಣಾ ಮೋಹನ್ ತಮ್ಮ ಶೈಲಿಯಲ್ಲಿ ಸುಮಾರು 24ಕ್ಕೂ ಅಧಿಕ ಕಲಾಕೃತಿಗಳನ್ನು ರಚಿಸಿದ್ದಾರೆ. ಪ್ರದರ್ಶನವು ಮೇ 26ರಿಂದ ಮೇ 27ರವರೆಗೆ ಬೆಳಗ್ಗೆ 11ರಿಂದ ಸಂಜೆ 7 ರವರೆಗೆ ಕಲಾಸಕ್ತರ ವೀಕ್ಷಣೆಗೆ ವ್ಯವಸ್ಥೆ ಗೊಳಿಸಲಾಗಿದೆ ಎಂದರು.
ಮೇ 25ರಂದು ಸಂಜೆ 5 ಕ್ಕೆ ಮೂಡಬಿದ್ರೆ ಆಳ್ವಾಸ್ನ ಅಧ್ಯಕ್ಷ ಡಾ.ಮೋಹನ್ ಆಳ್ವ ಪ್ರದರ್ಶನವನ್ನು ಉದ್ಘಾಟಿಸ ಲಿರುವರು. ಉಜ್ವಲ್ ಸಮೂಹದ ಆಡಳಿತ ನಿರ್ದೇಶಕ ಅಜೆಯ್ ಪಿ.ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿ ದ್ದಾರೆ. ಮಂಗಳೂರಿನ ಲ್ಯಾಮಿನ್ ಫ್ರೇಮ್ಸ್ನ ಮಾಲಕರಾದ ನರೇಂದ್ರ ಶೆಣೈ ಸ್ಮರಿಣಿಕೆ ಸ್ಟಿಕ್ಕರ್ ಬಿಡುಗಡೆ ಮಾಡಲಿದ್ದಾರೆ ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕಲಾವಿದೆ ಪ್ರವೀಣಾ ಮೋಹನ್ ಉಪಸ್ಥಿತರಿದ್ದರು.