ಉಳ್ಳಾಲ: ಸಯ್ಯಿದ್ ಮದನಿ ವುಮೆನ್ಸ್ ಅಕಾಡೆಮಿ ಉದ್ಘಾಟನೆ

ಉಳ್ಳಾಲ: ಸಯ್ಯಿದ್ ಮದನಿ ಚಾರಿಟೇಬಲ್ ಟ್ರಸ್ಟ್ ಅಧೀನದಲ್ಲಿರುವ ಸಯ್ಯಿದ್ ಮದನಿ ವುಮೆನ್ಸ್ ಅಕಾಡೆಮಿಯ ಉದ್ಘಾಟನೆಯು ಉಳ್ಳಾಲ ಹಝ್ರತ್ ಆಂಗ್ಲ ಮಾಧ್ಯಮ ಶಾಲೆಯ ವಠಾರದಲ್ಲಿ ಸೋಮವಾರ ನಡೆಯಿತು.
ಅರಬಿಕ್ ಕಾಲೇಜು ಪ್ರಾಂಶುಪಾಲ ಅಹ್ಮದ್ ಕುಟ್ಟಿ ಸಖಾಫಿ ದುಆ ನೆರವೇರಿಸಿದರು. ದರ್ಗಾ ಅಧ್ಯಕ್ಷ ಹಾಜಿ ಹನೀಫ್ ಹಾಜಿ ಮಾತನಾಡಿ ಸಯ್ಯಿದ್ ಮದನಿ ಚಾರಿಟೇಬಲ್ ಟ್ರಸ್ಟ್ ಅಧೀನದಲ್ಲಿರುವ ಶಾಲಾ ಕಾಲೇಜು ಧಾರ್ಮಿಕ ಚೌಕಟ್ಟಿನಲ್ಲಿ ನಡೆಯಬೇಕು, ಇದು ಕಮರ್ಷಿಯಲ್ ಶಾಲೆಯಲ್ಲ, ನಮ್ಮ ಉದ್ದೇಶ ಉತ್ತಮ ಮೌಲ್ಯಾಧಾರಿತ ಶಿಕ್ಷಣ ನೀಡಬೇಕೆಂಬುದಾಗಿದೆ ಎಂದರು.
ದರ್ಗಾ ಉಪಾಧ್ಯಕ್ಷ ಅಶ್ರಫ್ ರೈಟ್ ವೇ ಮಾತನಾಡಿ, ಒಂದು ಕಲಿಕಾ ಸಂಸ್ಥೆಯು ಯಶಸ್ವಿಯಾಗಲು ವಿದ್ಯಾರ್ಥಿ, ಹೆತ್ತವರು, ಶಿಕ್ಷಕರು ಮತ್ತು ಆಡಳಿತದವರು ಒಂದಾಗಿ ಹೋದರೆ ಮಾತ್ರ ಸಾಧ್ಯ ಎಂದರು.
ಹಳೆಕೋಟೆ ಸಯ್ಯಿದ್ ಮದನಿ ಶಿಕ್ಷಣ ಸಂಸ್ಥೆಯ ಮುಖ್ಯೋಪಾಧ್ಯಾಯರಾದ ಕೆ.ಎಮ್.ಕೆ ಮಂಜನಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ದರ್ಗಾ ಉಪಾಧ್ಯಕ್ಷ ಹಸೈನಾರ್, ಲೆಕ್ಕ ಪರಿಶೋಧಕ ಫಾರೂಕ್, ಕೋಶಾಧಿಕಾರಿ ನಾಝಿಮ್ ಮುಕ್ಕಚ್ಚೇರಿ, ಜೊತೆ ಕಾರ್ಯದರ್ಶಿ ಮುಸ್ತಫಾ, ಇಸಾಕ್ ಹಾಗೂ ಸಮಿತಿ ಸದಸ್ಯರಾದ ಝಿಯಾದ್ ತಂಙಳ್, ಅಹೂದಿ, ತಹ್ಸೀನ್ ತೋಟ, ಪ್ರೊಫೆಸರ್ ಇಬ್ರಾಹಿಮ್ ಅಹ್ಸನಿ, ಸಯ್ಯಿದ್ ಮದನಿ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಇಮ್ತಿಯಾಝ್, ಸಂಗೀತಾ, ನಸೀಮಾ, ರಮ್ಲತ್, ಗೀತಾ,ಭಾರತಿ, ಪವಿತ್ರ, ಅಬ್ದುರ್ರಹ್ಮಾನ್ ಮತ್ತಿತರರು ಉಪಸ್ಥಿತರಿದ್ದರು.
ಉಳ್ಳಾಲ ಹಝ್ರತ್ ಸಯ್ಯಿದ್ ಮದನಿ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪದ್ಯಾಯರಾದ ರಸೂಲ್ ಖಾನ್, ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.