ಪಂಜಾಬ್ ಯುವಕ ಅಮೆರಿಕದಲ್ಲಿ ಗುಂಡೇಟಿಗೆ ಬಲಿ
ಲಾಸ್ ಏಂಜಲಿಸ್, ನ. 15: ಪಂಜಾಬ್ನ ಬಂಗ ಜಿಲ್ಲೆಯ ಕೊತ್ರಾನ್ ಗ್ರಾಮದ ನಿವಾಸಿ 21 ವರ್ಷದ ಧರಂಪ್ರೀತ್ ಸಿಂಗ್ ಕ್ಯಾಲಿಫೋರ್ನಿಯ ರಾಜ್ಯದ ಫ್ರೆಸ್ನೊ ನಗರದ ಕಿರಾಣಿ ಅಂಗಡಿಯೊಂದರಲ್ಲಿ ಗುಂಡಿನ ದಾಳಿಯಲ್ಲಿ ಮಂಗಳವಾರ ರಾತ್ರಿ ಮೃತಪಟ್ಟಿದ್ದಾರೆ.
ಅವರ ಮೇಲೆ ದರೋಡೆಕೋರರು ಗುಂಡು ಹಾರಿಸಿರಬೇಕೆಂದು ಶಂಕಿಸಲಾಗಿದೆ.
ಅವರು ಎರಡು ವರ್ಷಗಳ ಹಿಂದೆ ಅಮೆರಿಕಕ್ಕೆ ಹೋಗಿದ್ದರು. ಅವರು ಅಮೆರಿಕದಲ್ಲಿ ತನ್ನ ಮಾವ ಮತ್ತು ಅತ್ತೆ ಜೊತೆಗೆ ವಾಸವಾಗಿದ್ದರು. ಅತ್ತೆ ಮತ್ತು ಮಾವ ಹಲವು ವರ್ಷಗಳಿಂದ ಅಮೆರಿಕದಲ್ಲಿ ನೆಲೆಸಿದ್ದಾರೆ.
ಧರಂಪ್ರೀತ್ ಪೆಟ್ರೋಲ್ ಪಂಪೊಂದರ ಕಿರಾಣಿ ಅಂಗಡಿಯಲ್ಲಿ ಅರೆಕಾಲಿಕ ಕೆಲಸ ಮಾಡುತ್ತಿದ್ದರು.
ಸ್ಥಳೀಯ ನಾಲ್ವರು ದರೋಡೆ ಮಾಡುವ ಉದ್ದೇಶದಿಂದ ಅಂಗಡಿಗೆ ಬಂದಿದ್ದರು ಎನ್ನಲಾಗಿದೆ.
Next Story