ಶಿಕಾಗೊ: ಭಾರತೀಯ ವಿದ್ಯಾರ್ಥಿ ಮೇಲೆ ಗುಂಡಿನ ದಾಳಿ
ಶಿಕಾಗೊ (ಅಮೆರಿಕ), ಡಿ. 10: ಅಮೆರಿಕದ ಶಿಕಾಗೊದಲ್ಲಿ ಭಾರತೀಯ ವಿದ್ಯಾರ್ಥಿಯೊಬ್ಬರ ಮೇಲೆ ಶನಿವಾರ ದುಷ್ಕರ್ಮಿಯೊಬ್ಬ ಗುಂಡು ಹಾರಿಸಿದ್ದು, ಪರಿಸ್ಥಿತಿ ಗಂಭೀರವಾಗಿದೆ. ಅವರು ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಹೈದರಾಬಾದ್ ನಿವಾಸಿಯಾಗಿರುವ ಮುಹಮ್ಮದ್ ಅಕ್ಬರ್ ಶಿಕಾಗೊದ ಅಲ್ಬಾನಿ ಪಾರ್ಕ್ ಉಪನಗರದಲ್ಲಿ ಬೆಳಗ್ಗೆ ಸುಮಾರು 8:45ರ ಸುಮಾರಿಗೆ ತನ್ನ ಕಾರಿನತ್ತ ನಡೆದು ಹೋಗುತ್ತಿದ್ದಾಗ ಅವರ ಕೆನ್ನೆಗೆ ಅಪರಿಚಿತ ವ್ಯಕ್ತಿಯೊಬ್ಬ ಗುಂಡು ಹಾರಿಸಿ ಪರಾರಿಯಾಗಿದ್ದಾನೆ ಎನ್ನಲಾಗಿದೆ.
30 ವರ್ಷದ ಅಕ್ಬರ್ ಇಲಿನಾಯಿಸ್ನಲ್ಲಿರುವ ಡೆವ್ರಿ ವಿಶ್ವವಿದ್ಯಾನಿಲಯದಲ್ಲಿ ಕಂಪ್ಯೂಟರ್ ಸಿಸ್ಟಮ್ಸ್ ನೆಟ್ವರ್ಕಿಂಗ್ ಆ್ಯಂಡ್ ಟೆಲಿಕಮ್ಯೂನಿಕೇಶನ್ಸ್ ಸ್ನಾತಕೋತ್ತರ ಪದವಿ ಅಧ್ಯಯನ ಮಾಡುತ್ತಿದ್ದಾರೆ.
ಅವರ ಕುಟುಂಬ ಹೈದರಾಬಾದ್ನ ಉಪ್ಪಲ್ನಲ್ಲಿ ವಾಸಿಸುತ್ತಿದೆ.
Next Story