ಭಾರತೀಯ ಅಧಿಕಾರಿಗಳಿಗೆ ನಿಷೇಧ: ಬ್ರಿಟನ್ ಸಿಖ್ ಗುಂಪು ಪ್ರತಿಪಾದನೆ
ಲಂಡನ್, ಜ. 6: ಬ್ರಿಟನ್ನ ಗುರುದ್ವಾರಗಳಿಗೆ ಭಾರತೀಯ ಅಧಿಕಾರಿಗಳು ಭೇಟಿ ನೀಡುವುದನ್ನು ನಿಷೇಧಿಸಬೇಕೆಂದು ಆ ದೇಶದಲ್ಲಿರುವ ಸಿಕ್ ಗುಂಪೊಂದು ಬಯಸಿದೆ. ಭಾರತೀಯ ಅಧಿಕಾರಿಗಳು ಸಿಖ್ ಸಮುದಾಯದ ಆಂತರಿಕ ವಿಷಯಗಳಲ್ಲಿ ಹಸ್ತಕ್ಷೇಪ ನಡೆಸುತ್ತಿದ್ದಾರೆ ಎಂಬುದಾಗಿ ಅದು ಆರೋಪಿಸಿದೆ.
‘‘ನಮ್ಮ ಸಂಸ್ಥೆಗಳು ಮತ್ತು ಸಿಖ್ ವ್ಯವಹಾರಗಳಲ್ಲಿ ಭಾರತ ಸರಕಾರದ ಅಧಿಕಾರಿಗಳು ಮತ್ತು ಅವರ ಪ್ರತಿನಿಧಿಗಳು ನಡೆಸುತ್ತಿರುವ ಹಸ್ತಕ್ಷೇಪಗಳಿಂದಾಗಿ ಬ್ರಿಟಿಶ್ ಸಿಖ್ಖರು ರೋಸಿ ಹೋಗಿದ್ದಾರೆ’’ ಎಂದು ಸಿಖ್ ಫೆಡರೇಶನ್ (ಯುಕೆ) ಅಧ್ಯಕ್ಷ ಭಾಯ್ ಅಮ್ರಿಕ್ ಸಿಂಗ್ ಹೇಳಿದ್ದಾರೆ.
Next Story