ನೈಜೀರಿಯದಲ್ಲಿ: ಜನಾಂಗೀಯ ಘರ್ಷಣೆ; 86 ಸಾವು
ಅಬುಜ (ನೈಜೀರಿಯ), ಜೂ. 25: ಮಧ್ಯ ನೈಜೀರಿಯದಲ್ಲಿ ಅಲೆಮಾರಿ ಕುರಿಗಾಹಿಗಳು ಸ್ಥಳೀಯ ಕೃಷಿಕರ ಮೇಲೆ ನಡೆಸಿದ ದಾಳಿಯಲ್ಲಿ 86 ಮಂದಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ರವಿವಾರ ತಿಳಿಸಿದ್ದಾರೆ.
ಗುರುವಾರ ಬೆರೊಮ್ ಗ್ರಾಮದ ಕೃಷಿಕರು ಫುಲಾನಿ ಕುರಿಗಾಹಿಗಳ ಮೇಲೆ ನಡೆಸಿದ ದಾಳಿಯ ಬಳಿಕ, ಈ ಪ್ರತೀಕಾರದ ದಾಳಿ ನಡೆದಿದೆ ಎನ್ನಲಾಗಿದೆ.
ಪ್ಲೇಟೊ ರಾಜ್ಯದ ಬರಿಕಿನ್ ಲಡಿ ಪ್ರದೇಶದಲ್ಲಿ ಹಿಂಸಾಚಾರ ನಡೆದಿದೆ.
ಶನಿವಾರ ಘರ್ಷಣೆ ನಡೆದ ಬಳಿಕ ಬೆರೊಮ್ ಗ್ರಾಮಸ್ಥರು ನಡೆಸಿದ ಶೋಧದ ವೇಳೆ 86 ಮಂದಿಯ ಮೃತದೇಹಗಳು ಪತ್ತೆಯಾಗಿವೆ.
Next Story