ಮೊಬೈಲ್ನಲ್ಲಿ ಆಕ್ಷೇಪಾರ್ಹ ಚಿತ್ರ: ಭಾರತೀಯನ ಗಡಿಪಾರು
ಮೆಲ್ಬರ್ನ್, ಜೂ. 26: ಪರ್ತ್ನ ವಿಮಾನ ನಿಲ್ದಾಣವೊಂದರಲ್ಲಿ ನಡೆದ ಭದ್ರತಾ ತಪಾಸಣೆಯ ವೇಲೆ ಮೊಬೈಲ್ನಲ್ಲಿ ಮಕ್ಕಳ ಮೇಲಿನ ದೌರ್ಜನ್ಯವನ್ನು ಬಿಂಬಿಸುವ ಚಿತ್ರ ಪತ್ತೆಯಾದ ಹಿನ್ನೆಲೆಯಲ್ಲಿ, ಭಾರತೀಯನೋರ್ವನನ್ನು ಆಸ್ಟ್ರೇಲಿಯದಿಂದ ಗಡಿಪಾರು ಮಾಡಲಾಗಿದೆ.
30 ವರ್ಷದ ಭಾರತೀಯ ಪುರುಷನು ತಾತ್ಕಾಲಿಕ ಸ್ಕಿಲ್ಡ್ ಗ್ರಾಜುಯೇಟ್ ವೀಸಾದ ಮೇಲೆ ಶುಕ್ರವಾರ ಸಿಂಗಾಪುರದಿಂದ ಪರ್ತ್ಗೆ ಬಂದಿದ್ದನು. ಅಲ್ಲಿ ಗಡಿ ಪಡೆ ಅಧಿಕಾರಿಗಳು ಆತನ 3 ಮೊಬೈಲ್ಗಳನ್ನು ತಪಾಸಣೆಗೈದರು.
ಒಂದು ಮೊಬೈಲ್ನಲ್ಲಿ ಆಕ್ಷೇಪಾರ್ಹ ಚಿತ್ರಗಳು ಇರುವುದು ಪತ್ತೆಯಾಯಿತು ಎಂದು ‘ವೆಸ್ಟ್ ಆಸ್ಟ್ರೇಲಿಯನ್’ ಪತ್ರಿಕೆ ವರದಿ ಮಾಡಿದೆ.
Next Story