ಇಂದು ಭಾರತಕ್ಕೆ ಮರಳಲಿದ್ದಾರೆಯೇ ಝಾಕಿರ್ ನಾಯ್ಕ್?: ಈ ಬಗ್ಗೆ ಅವರ ವಕೀಲ ಹೇಳಿದ್ದೇನು?
ಹೊಸದಿಲ್ಲಿ, ಜು.4: ತಾನು ಭಾರತಕ್ಕೆ ಹಿಂದಿರುಗುತ್ತಿದ್ದೇನೆ ಎನ್ನುವ ಮಾಧ್ಯಮ ವರದಿಗಳನ್ನು ನಿರಾಕರಿಸಿರುವ ಧಾರ್ಮಿಕ ವಿದ್ವಾಂಸ ಝಾಕಿರ್ ನಾಯ್ಕ್, ಈ ಸುದ್ದಿಗಳು, "ಆಧಾರರಹಿತ ಹಾಗು ಸುಳ್ಳು" ಎಂದಿದ್ದಾರೆ.
ಮಲೇಷ್ಯಾದಿಂದ ಝಾಕಿರ್ ನಾಯ್ಕ್ ಭಾರತಕ್ಕೆ ಹಿಂದಿರುಗುತ್ತಿದ್ದಾರೆ. "ಇಂದು ರಾತ್ರಿ ಝಾಕಿರ್ ನಾಯ್ಕ್ ದೇಶದಿಂದ ತೆರಳಲಿದ್ದಾರೆ. ಇಂದು ಅವರು ಭಾರತಕ್ಕೆ ವಿಮಾನದ ಮೂಲಕ ತೆರಳಲಿದ್ದಾರೆ" ಎಂದು ಮಲೇಶ್ಯಾ ಸರಕಾರದ ಮೂಲವೊಂದು ಮಾಹಿತಿ ನೀಡಿದ್ದಾಗಿ ಮಾಧ್ಯಮವೊಂದು ವರದಿ ಮಾಡಿತ್ತು. ಆದರೆ ಈ ಸುದ್ದಿಯನ್ನು ಝಾಕಿರ್ ನಾಯ್ಕ್ ನಿರಾಕರಿಸಿದ್ದಾರೆ.
" ಈ ಸುದ್ದಿ ಸಂಪೂರ್ಣ ಆಧಾರರಹಿತ ಹಾಗು ಸುಳ್ಳು" ಎಂದಿರುವ ಅವರು, "ಪಕ್ಷಪಾತದ ಕಾನೂನಿನಿಂದ ಸುರಕ್ಷಿತ ಎಂದು ಎನಿಸುವವರೆಗೆ ಭಾರತಕ್ಕೆ ಹಿಂದಿರುಗುವ ಯಾವುದೇ ಯೋಜನೆಯಿಲ್ಲ. ಸರಕಾರವು ನ್ಯಾಯಯುತವಾಗಿದೆ ಎಂದು ನನಗೆ ಅನಿಸಿದಾಗ ತಾಯ್ನಾಡಿಗೆ ಹಿಂದಿರುಗಲಿದ್ದೇನೆ" ಎಂದು ಝಾಕಿರ್ ನಾಯ್ಕ್ ಹೇಳಿರುವುದಾಗಿ ಅವರ ವಕೀಲ ಶಹರಾಬುದ್ದೀನ್ ಅಲಿ ತಿಳಿಸಿದ್ದಾರೆ.
Next Story