ಲಷ್ಕರ್ ಕಮಾಂಡರ್ನನ್ನು ‘ಜಾಗತಿಕ ಉಗ್ರ’ನೆಂದು ಘೋಷಿಸಿದ ಅಮೆರಿಕ
ವಾಶಿಂಗ್ಟನ್, ಆ. 1: ಭಾರತದಲ್ಲಿ ಭಯೋತ್ಪಾದಕ ದಾಳಿಗಳನ್ನು ನಡೆಸುತ್ತಿರುವ ಲಷ್ಕರ್ ತಯ್ಯಬ ಭಯೋತ್ಪಾದಕ ಸಂಘಟನೆಯ ಹಿರಿಯ ಕಮಾಂಡರ್ ಅಬ್ದುರ್ರಹ್ಮಾನ್ ಅಲ್-ಡಾಖಿಲ್ನನ್ನು ‘ಜಾಗತಿಕ ಭಯೋತ್ಪಾದಕ’ ಎಂಬುದಾಗಿ ಅಮೆರಿಕ ಮಂಗಳವಾರ ಘೋಷಿಸಿದೆ ಹಾಗೂ ಈ ಭಯೋತ್ಪಾದಕ ಸಂಘಟನೆಗೆ ಆರ್ಥಿಕ ನೆರವು ಒದಗಿಸುತ್ತಿರುವ ಇಬ್ಬರು ಪಾಕಿಸ್ತಾನಿಯರ ವಿರುದ್ಧ ಆರ್ಥಿಕ ದಿಗ್ಬಂಧನಗಳನ್ನು ವಿಧಿಸಿದೆ.
ತಯ್ಯಬದ ಸಹ ಸಂಘಟನೆ ಫಲಾಹೆ ಇನ್ಸಾನಿಯತ್ ಫೌಂಡೇಶನ್ (ಎಫ್ಐಎಫ್)ನಲ್ಲಿ ಕೆಲಸ ಮಾಡುತ್ತಿರುವ ಹಮೀದುಲ್ ಹಸನ್ ಮತ್ತು ಅಬ್ದುಲ್ ಜಬ್ಬಾರ್ ಆರ್ಥಿಕ ದಿಗ್ಬಂಧನ ಎದುರಿಸುತ್ತಿರುವವರು.
‘‘ಇಂದಿನ ಘೋಷಣೆಯು ಭಯೋತ್ಪಾದಕ ದಾಳಿಗಳನ್ನು ನಡೆಸಲು ಡಾಖಿಲ್ನಿಗೆ ಆರ್ಥಿಕ ಸಂಪನ್ಮೂಲಗಳನ್ನು ನಿರಾಕರಿಸುತ್ತದೆ’’ ಎಂದು ವಿದೇಶಾಂಗ ಇಲಾಖೆಯು ಹೇಳಿಕೆಯೊಂದರಲ್ಲಿ ತಿಳಿಸಿದೆ.
Next Story