ಎಪ್ರಿಲ್ 3ರಿಂದ ಬ್ರಸೆಲ್ಸ್ ವಿಮಾನ ನಿಲ್ದಾಣ ಪುನಾರಂಭ
ಬ್ರಸೆಲ್ಸ್, ಎ. 2: ಭಯೋತ್ಪಾದಕ ದಾಳಿ ನಡೆದ 12 ದಿನಗಳ ಬಳಿಕ ಬ್ರಸೆಲ್ಸ್ ಅಂತಾರಾಷ್ಟ್ರೀಯ ವಿಮನ ನಿಲ್ದಾಣ ರವಿವಾರ ತೆರೆಯಲಿದೆ ಎಂದು ಅದರ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅರ್ನಾಡ್ ಫೀಸ್ಟ್ ಪ್ರಕಟಿಸಿದ್ದಾರೆ.
ವಿಮಾನ ನಿಲ್ದಾಣ ರವಿವಾರ ತೆರೆಯಲಿದ್ದು, ಮಧ್ಯಾಹ್ನದ ಬಳಿಕ ಅಥೆನ್ಸ್, ಟೂರಿನ್ ಮತ್ತು ಫರೊ ನಗರಗಳಿಗೆ ಮೂರು ವಿಮಾನಗಳು ಹಾರಲಿವೆ ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಅವರು ತಿಳಿಸಿದರು.
Next Story