ಅಫ್ಘಾನ್: ಚುನಾವಣಾ ಸಭೆಯಲ್ಲಿ ಸ್ಫೋಟ; 12 ಸಾವು
ಕಾಬೂಲ್, ಅ. 13: ಅಫ್ಘಾನಿಸ್ತಾನದಲ್ಲಿ ಅಕ್ಟೋಬರ್ 20ರಂದು ನಡೆಯಲಿರುವ ಉಪಚುನಾವಣೆಯಲ್ಲಿ ಸ್ಪರ್ಧಿಸಿರುವ ಮಹಿಳಾ ಅಭ್ಯರ್ಥಿಯೊಬ್ಬರ ಚುನಾವಣಾ ಸಭೆಯಲ್ಲಿ ನಡೆದ ಬಾಂಬ್ ಸ್ಫೋಟದಲ್ಲಿ ಕನಿಷ್ಠ 12 ಮಂದಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.
ಸಭೆ ನಡೆದ ಸ್ಥಳದ ಸಮೀಪದಲ್ಲಿ ಸ್ಫೋಟಕಗಳನ್ನು ಇರಿಸಲಾಗಿತ್ತು.
ಭಾಷಣ ಮಾಡಲು ಅಭ್ಯರ್ಥಿ ಆಗಮಿಸುವ ಮುನ್ನವೇ ಸ್ಫೋಟ ನಡೆದಿದೆ ಎಂದುದ ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
Next Story