ಪೈಲಟ್ಗೆ ನಿದ್ದೆ: ನಿಲ್ದಾಣ ದಾಟಿ 50 ಕಿ.ಮೀ. ಹಾರಿದ ವಿಮಾನ
ಕ್ಯಾನ್ಬೆರ (ಆಸ್ಟ್ರೇಲಿಯ), ನ. 27: ಸಣ್ಣ ವಿಮಾನವೊಂದರ ಪೈಲಟ್ ನಿದ್ದೆ ಮಾಡಿದ ಪರಿಣಾಮವಾಗಿ ವಿಮಾನವು ಇಳಿಯಬೇಕಾಗಿದ್ದ ನಿಲ್ದಾಣವನ್ನು ದಾಟಿ 50 ಕಿ.ಮೀ. ಹಾರಿದ ಘಟನೆಯೊಂದು ವರದಿಯಾಗಿದೆ.
ತಾಸ್ಮೇನಿಯದಲ್ಲಿರುವ ಕಿಂಗ್ ದ್ವೀಪಕಕ್ಕೆ ಡೆವನ್ಪೋರ್ಟ್ನಿಂದ ಪೈಪರ್ ಪಿಎ-31 ವಿಮಾನ ಹಾರುತ್ತಿತ್ತು ಹಾಗೂ ಅದರಲ್ಲಿ ಪೈಲಟ್ ಒಬ್ಬರೇ ಪ್ರಯಾಣಿಸುತ್ತಿದ್ದರು ಎಂದು ಸುರಕ್ಷತಾ ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.
ಘಟನೆಯು ನವೆಂಬರ್ 8ರಂದು ನಡೆದಿದೆ ಎಂದು ಬಿಬಿಸಿ ವರದಿ ಮಾಡಿದೆ. ಆದಾಗ್ಯೂ, ಬಳಿಕ ಎಚ್ಚೆತ್ತ ಪೈಲಟ್ ವಿಮಾನವನ್ನು ಹಿಂದೆ ತಿರುಗಿಸಿದ್ದಾರೆ ಹಾಗೂ ವಿಮಾನ ಸುರಕ್ಷಿತವಾಗಿ ಭೂಸ್ಪರ್ಶ ಮಾಡಿದೆ.
Next Story