ಸಿರಿಯ: ಸರಕಾರಿ ಪಡೆಗಳ ದಾಳಿಯಲ್ಲಿ 17 ನಾಗರಿಕರ ಸಾವು
ಬೈರೂತ್ (ಲೆಬನಾನ್), ಎ. 4: ವಾಯುವ್ಯ ಸಿರಿಯದ ಬಂಡುಕೋರ ಪ್ರಾಬಲ್ಯದ ಪ್ರದೇಶಗಳ ಮೇಲೆ ಸರಕಾರಿ ಪಡೆಗಳು ನಡೆಸಿದ ಶೆಲ್ ದಾಳಿಯಲ್ಲಿ 17 ನಾಗರಿಕರು ಮೃತಪಟ್ಟಿದ್ದಾರೆ ಎಂದು ಬ್ರಿಟನ್ನಲ್ಲಿ ನೆಲೆಸಿರುವ ಸಿರಿಯ ಮಾನವಹಕ್ಕುಗಳ ವೀಕ್ಷಣಾಲಯ ಗುರುವಾರ ತಿಳಿಸಿದೆ.
ಸರಕಾರಿ ಪಡೆಗಳು ಹಲವಾರು ಸ್ಥಳಗಳನ್ನು ಗುರಿಯಾಗಿಸಿ ಶೆಲ್ ದಾಳಿ ನಡೆಸಿದವು ಹಾಗೂ ಮೃತಪಟ್ಟವರಲ್ಲಿ ಅರ್ಧದಷ್ಟು ಮಂದಿ 18 ವರ್ಷಕ್ಕಿಂತ ಕೆಳಗಿನವರು ಎಂದು ಅದು ಹೇಳಿದೆ.
Next Story