ಬಾರ್ ನಲ್ಲಿ ದಾಳಿ: 23 ಮಂದಿ ಮೃತ್ಯು; 13 ಮಂದಿಗೆ ಗಾಯ
ಮೆಕ್ಸಿಕೋ, ಆ.28: ದಾಳಿಯೊಂದರ ನಂತರ ಬೆಂಕಿ ಹೊತ್ತಿಕೊಂಡ ಪರಿಣಾಮ 23 ಜನರು ಮೃತಪಟ್ಟು 13 ಮಂದಿ ಗಂಭೀರವಾಗಿ ಗಾಯಗೊಂಡ ಘಟನೆ ಮೆಕ್ಸಿಕೋದಲ್ಲಿ ನಡೆದಿದೆ.
“ದುಷ್ಕರ್ಮಿಗಳ ದಾಳಿಯಿಂದ ಬೆಂಕಿ ಹೊತ್ತಿಕೊಂಡಿದೆ” ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ದಾಳಿಕೋರರು ಕಾಕ್ ಟೇಲ್ ಬಾಟಲ್ ಗಳಿಗೆ ಬೆಂಕಿ ಹೊತ್ತಿಸಿ ಎಸೆದಿದ್ದರು ಎನ್ನಲಾಗಿದೆ.
ಬಾರ್ ನ ಉಪಕರಣಗಳೆಲ್ಲವೂ ಸುಟ್ಟು ಕರಕಲಾಗಿವೆ. ಕೂಡಲೇ ಸ್ಥಳಕ್ಕೆ ಪೊಲೀಸರು ಮತ್ತು ಅಗ್ನಿಶಾಮಕ ದಳ ಧಾವಿಸಿದ್ದು, ರಕ್ಷಣಾ ಕಾರ್ಯಾಚರಣೆ ನಡೆಸಿದೆ.
Next Story