ಉಗ್ರ ಸಂಘಟನೆ ಸೇರಬಯಸಿದ್ದ ನಾಲ್ವರು ಭಾರತೀಯರ ಬಂಧನ
ಸಿರಿಯಾದಲ್ಲಿ ಇಸ್ಲಾಮಿಕ್ ಸ್ಟೇಟ್ ಉಗ್ರಗಾಮಿ ಸಂಘಟನೆ ಸೇರಲು ಮುಂದಾಗಿದ್ದ ನಾಲ್ವರು ಭಾರತೀಯ ಯುವಕರನ್ನು ಸಿರಿಯಾ ಆಡಳಿತ ವಶಕ್ಕೆ ತೆಗೆದುಕೊಂಡಿದೆ. ಅವರ ವಿವರಗಳನ್ನು ಪಡೆಯುವಂತೆ ಭಾರತೀಯ ಅಧಿಕಾರಿಗಳಿಗೆ ಮನವಿ ಮಾಡಿದೆ.
ಸಿರಿಯಾದ ಉಪಪ್ರಧಾನಿ ವಲೀದ್ ಅಲ್ ಮೌಲೆಮ್ ಅವರು ಭಾರತಕ್ಕೆ ಭೇಟಿ ನೀಡಿದ ವೇಳೆ ಇದನ್ನು ಪ್ರಕಟಿಸಿದ್ದು, ದಮಾಸ್ಕಸ್ನಲ್ಲಿ ಇವರನ್ನು ವಶಕ್ಕೆ ಪಡೆಯಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ ಅವರನ್ನು ಬಂಧಿಸಲಾಗಿದೆಯೇ ಎಂಬ ಬಗ್ಗೆ ಸ್ಪಷ್ಟನೆ ನೀಡಿಲ್ಲ.
ಈ ಯುವಕರು ಜೋರ್ಡಾನ್ ಮೂಲಕ ಸಿರಿಯಾ ಪ್ರವೇಶಿಸಲು ಯತ್ನಿಸಿದ್ದರು. ಆದರೆ ಅವರ ಹೆಸರು ಅಥವಾ ವಿವರಗಳನ್ನು ಅವರು ನೀಡಿಲ್ಲ.
Next Story