ಕ್ಯಾಲಿಫೋರ್ನಿಯ ಪಟ್ಟಣದ ಮೇಯರ್ ಹುದ್ದೆಗೆ ಭಾರತೀಯ ಅಮೆರಿಕನ್ ಮಹಿಳೆ ಸ್ಪರ್ಧೆ
ಫೋಟೊ ಕೃಪೆ: twitter.com/amworksforyou1
ಲಾಸ್ ಏಂಜಲಿಸ್, ಜ. 10: ಕ್ಯಾಲಿಫೋರ್ನಿಯದ ಸ್ಯಾನ್ ರಮೋನ್ ಪಟ್ಟಣದ ಮೇಯರ್ ಹುದ್ದೆಗೆ ಸ್ಪರ್ಧಿಸುವುದಾಗಿ ಭಾರತೀಯ ಅಮೆರಿಕನ್ ಉದ್ಯಮಿ ಅಪರ್ಣಾ ಮಾದಿರೆಡ್ಡಿ ಘೋಷಿಸಿದ್ದಾರೆ. ಹಾಲಿ ಮೇಯರ್ ಬಿಲ್ ಕ್ಲಾರ್ಕ್ಸನ್ ನಾಲ್ಕು ಅವಧಿಗೆ ಮೇಯರ್ ಆದ ಬಳಿಕ ಅಧಿಕಾರದಿಂದ ಕೆಳಗಿಳಿಯಲಿದ್ದಾರೆ.
ಹಿಂದೆ ಸ್ಯಾನ್ ರಮೋನ್ ಪುರಸಭೆಗೆ ಅಪರ್ಣಾ ಸ್ಪರ್ಧಿಸಿದ್ದರೂ ಗೆಲ್ಲಲು ಸಾಧ್ಯವಾಗಿರಲಿಲ್ಲ ಎಂದು ‘ಇಂಡಿಯ ವೆಸ್ಟ್’ ಪತ್ರಿಕೆ ಗುರುವಾರ ವರದಿ ಮಾಡಿದೆ.
ತನ್ನ ಗಂಡ ವೆಂಕಿ ಜೊತೆಗೆ 1998ರಲ್ಲಿ ‘ಅರ್ವಸಾಫ್ಟ್ ಇಂಕ್’ ಕಂಪೆನಿಯನ್ನು ಆರಂಭಿಸಿದ ಉದ್ಯಮಿ ಮಹಿಳೆ, ಡೆಮಾಕ್ರಟಿಕ್ ಪಕ್ಷದ ಸ್ಥಳೀಯ ಘಟಕದಲ್ಲಿ ಸಕ್ರಿಯವಾಗಿದ್ದಾರೆ.
ಮಾದಿರೆಡ್ಡಿ ಕುಟುಂಬವು ಸ್ಯಾನ್ ರಮೋನ್ನಲ್ಲಿ 22 ವರ್ಷಗಳಿಂದ ವಾಸಿಸುತ್ತಿದೆ.
Next Story