ಚೀನೀಯರಿಗೆ ವೀಸಾ ಮುಕ್ತ ಪ್ರವಾಸ ನಿಲ್ಲಿಸಿದ ರಶ್ಯ
ಮಾಸ್ಕೊ (ರಶ್ಯ), ಫೆ. 2: ಚೀನಾದಲ್ಲಿ ತಾಂಡವವಾಡುತ್ತಿರುವ ಕೊರೋನವೈರಸ್ ಸೋಂಕಿನ ಹಿನ್ನೆಲೆಯಲ್ಲಿ, ರಶ್ಯ ಸರಕಾರವು ಶನಿವಾರ ಚೀನಾ ರಾಷ್ಟ್ರೀಯರಿಗೆ ವೀಸಾ ಮುಕ್ತ ಪ್ರವಾಸವನ್ನು ನಿಲ್ಲಿಸಿದೆ ಹಾಗೂ ಅವರಿಗೆ ಉದ್ಯೋಗ ವೀಸಾಗಳನ್ನು ನೀಡುವುದನ್ನೂ ಸ್ಥಗಿತಗೊಳಿಸಿದೆ.
‘‘ದೇಶದ ಸುರಕ್ಷತೆಯನ್ನು ಕಾಪಾಡಲು, ಸಾರ್ವಜನಿಕ ಆರೋಗ್ಯವನ್ನು ರಕ್ಷಿಸಲು ಹಾಗೂ ನೂತನ ಕೊರೋನವೈರಸ್ ಸಾಂಕ್ರಾಮಿಕ ರೋಗ ಹರಡುವುದನ್ನು ತಡೆಯಲು ಈ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಸರಕಾರಿ ವೆಬ್ಸೈಟ್ನಲ್ಲಿ ಹಾಕಿದ ಹೇಳಿಕೆಯೊಂದರಲ್ಲಿ ರಶ್ಯ ಸರಕಾರ ತಿಳಿಸಿದೆ.
Next Story