ಥಾಯ್ಲೆಂಡ್ನಲ್ಲಿ ಮೊದಲ ಕೊರೋನವೈರಸ್ ಸಾವು
ಬ್ಯಾಂಕಾಕ್ (ಥಾಯ್ಲೆಂಡ್), ಮಾ. 1: ಥಾಯ್ಲೆಂಡ್ನ 35 ವರ್ಷದ ವ್ಯಕ್ತಿಯೊಬ್ಬರು ನೂತನ-ಕೊರೋನವೈರಸ್ ಕಾಯಿಲೆಯಿಂದ ಮೃತಪಟ್ಟಿದ್ದಾರೆ ಎಂದು ದೇಶದ ರೋಗ ನಿಯಂತ್ರಣ ಇಲಾಖೆಯ ಮಹಾನಿರ್ದೇಶಕರು ರವಿವಾರ ತಿಳಿಸಿದ್ದಾರೆ. ಇದು ಥಾಯ್ಲೆಂಡ್ನ ಮೊದಲ ಕೊರೋನವೈರಸ್ ಸಾವಾಗಿದೆ.
ಸಾವಿಗೀಡಾಗಿರುವ ವ್ಯಕ್ತಿಯು ಡೆಂಗ್ ಕಾಯಿಲೆಯಿಂದಲೂ ಬಳಲುತ್ತಿದ್ದರು.
ಥಾಯ್ಲೆಂಡ್ನಲ್ಲಿ ಜನವರಿಯಿಂದ 42 ಕೊರೋನವೈರಸ್ ಸೋಂಕು ಪ್ರಕರಣಗಳು ದಾಖಲಾಗಿವೆ. ಅವರ ಪೈಕಿ 30 ಮಂದಿ ಚೇತರಿಸಿಕೊಂಡಿದ್ದಾರೆ ಹಾಗೂ 11 ಮಂದಿ ಈಗಲೂ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮೃತ ವ್ಯಕ್ತಿಯು ಚಿಲ್ಲರೆ ಮಾರಾಟ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದು, ರೋಗ ಹರಡುವಿಕೆಯ ಆರಂಭಿಕ ಹಂತದಲ್ಲಿ ಹಲವು ಪ್ರವಾಸಿಗರೊಡನೆ ಸಂಪರ್ಕ ಹೊಂದಿದ್ದರು ಎಂದು ಥಾಯ್ಲೆಂಡ್ ಆರೋಗ್ಯ ಅಧಿಕಾರಿಗಳು ಹೇಳಿದ್ದಾರೆ.
Next Story