ಅಂತರ್ರಾಷ್ಟ್ರೀಯ ವಿಮಾನಯಾನವನ್ನು ರದ್ದುಗೊಳಿಸಿದ ಪಾಕ್
ಇಸ್ಲಾಮಾಬಾದ್, ಮಾ. 21: ಕೊರೋನವೈರಸ್ ಸೋಂಕು ಹರಡುವಿಕೆಯ ವೇಗವನ್ನು ನಿಧಾನಗೊಳಿಸುವುದಕ್ಕಾಗಿ, ಪಾಕಿಸ್ತಾನಕ್ಕೆ ಬರುವ ಮತ್ತು ಅಲ್ಲಿಂದ ಹೋಗುವ ಎಲ್ಲ ಅಂತರ್ರಾಷ್ಟ್ರೀಯ ಪ್ರಯಾಣಿಕ ವಿಮಾನಗಳನ್ನು 15 ದಿನಗಳ ಕಾಲ ರದ್ದುಗೊಳಿಸುವುದಾಗಿ ಆ ದೇಶ ಶನಿವಾರ ಘೋಷಿಸಿದೆ.
‘‘ಇಂದು ರಾತ್ರಿ 8 ಗಂಟೆಯಿಂದ ಜಾರಿಗೆ ಬರುವಂತೆ ಎಲ್ಲ ಅಂತರ್ರಾಷ್ಟ್ರೀಯ ವಿಮಾನಯಾನಗಳನ್ನು ನಾವು ಅಮಾನತಿನಲ್ಲಿಡುತ್ತಿದ್ದೇವೆ’’ ಎಂದು ಪ್ರಧಾನಿಯ ವಿಶೇಷ ರಾಷ್ಟ್ರೀಯ ಭದ್ರತಾ ಸಲಹೆಗಾರ ಮುಯೀದ್ ಯೂಸುಫ್ ಇಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದರು.
ಪಾಕಿಸ್ತಾನದಲ್ಲಿ ಈವರೆಗೆ ಕೊರೋನವೈರಸ್ನಿಂದಾಗಿ ಮೂವರು ಮೃತಪಟ್ಟಿದ್ದಾರೆ ಹಾಗೂ 524 ಮಂದಿ ಸೋಂಕಿಗೆ ಒಳಗಾಗಿದ್ದಾರೆ.
Next Story