ಒಂದೇ ದಿನದಲ್ಲಿ 16 ವರ್ಷದ ಬಾಲಕಿ ಸೇರಿ 365 ಸಾವು
ಇನ್ನೊಂದು ಕೊರೋನವೈರಸ್ ಕೇಂದ್ರಬಿಂದು ಆಗುವತ್ತ ಫ್ರಾನ್ಸ್?
ಪ್ಯಾರಿಸ್ (ಫ್ರಾನ್ಸ್), ಮಾ. 27: ಫ್ರಾನ್ಸ್ನಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ 16 ವರ್ಷದ ಓರ್ವ ಬಾಲಕಿ ಸೇರಿದಂತೆ 365 ಮಂದಿ ಕೊರೋನವೈರಸ್ಗೆ ಬಲಿಯಾಗಿದ್ದಾರೆ. ಇದು ಫ್ರಾನ್ಸ್ನ ಒಂದು ದಿನದ ಅತಿ ಹೆಚ್ಚಿನ ಸಾವಿನ ಸಂಖ್ಯೆಯಾಗಿದೆ.
ದೇಶದ ಆಸ್ಪತ್ರೆಗಳಲ್ಲಿ ಈವರೆಗೆ ಕೊರೋನವೈರಸ್ನಿಂದಾಗಿ ಒಟ್ಟು 1,696 ಮಂದಿ ಬಲಿಯಾಗಿದ್ದಾರೆ ಎಂದು ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ದೇಶದ ಹಿರಿಯ ಆರೋಗ್ಯ ಅಧಿಕಾರಿ ಜೆರೋಮ್ ಸ್ಯಾಲೊಮನ್ ತಿಳಿಸಿದರು. ಮನೆಗಳಲ್ಲಿ ಅಥವಾ ವೃದ್ಧಾಶ್ರಮಗಳಲ್ಲಿ ಸತ್ತವರ ಸಂಖ್ಯೆ ಇದರಲ್ಲಿ ಸೇರಿಲ್ಲ ಎಂದರು. ದೇಶದಲ್ಲಿ ಈವರೆಗೆ 29,155 ಮಂದಿಯಲ್ಲಿ ಸೋಂಕು ಇರುವುದು ದೃಢಪಟ್ಟಿದೆ ಎಂದರು.
ಆದರೆ, ಸೋಂಕು ಪೀಡಿತರ ನೈಜ ಸಂಖ್ಯೆ ತುಂಬಾ ಹೆಚ್ಚಿರಬಹುದು, ಯಾಕೆಂದರೆ ಈಗ ಹೆಚ್ಚು ಅಪಾಯದ ಪರಿಸ್ಥಿತಿಯಲ್ಲಿರುವ ರೋಗಿಗಳಿಗೆ ಮಾತ್ರ ಪರೀಕ್ಷೆ ಮಾಡಲಾಗುತ್ತಿದೆ ಎಂದು ಅಧಿಕಾರಿ ನುಡಿದರು.
ಪ್ಯಾರಿಸ್ನ ಐಲ್-ಡಿ-ಫ್ರಾನ್ಸ್ ಪ್ರದೇಶದಲ್ಲಿ 16 ವರ್ಷದ ಹುಡುಗಿ ಮೃತಪಟ್ಟಿದ್ದಾರೆ ಎಂದು ಹೇಳಿದ ಅವರು, ಹೆಚ್ಚಿನ ವಿವರಗಳನ್ನು ನೀಡಲಿಲ್ಲ.