ಕೊರೋನ ವಿರುದ್ಧ ಹೋರಾಟಕ್ಕೆ ವೈದ್ಯವೃತ್ತಿಗೆ ಮರಳಿದ್ದಾರೆ ಈ ದೇಶದ ಪ್ರಧಾನಿ !
ಕೊರೋನ ವೈರಸ್ ವಿರುದ್ಧದ ಹೋರಾಟದಲ್ಲಿ ಭಾಗಿಯಾಗಲು ಐರ್ ಲ್ಯಾಂಡ್ ಪ್ರಧಾನಿ ಲಿಯೋ ವರಾಡ್ಕರ್ ವಾರಕ್ಕೆ ಒಂದು ಶಿಫ್ಟ್ ಪ್ರಕಾರ ವೈದ್ಯರಾಗಿ ಕೆಲಸ ಮಾಡಲಿದ್ದಾರೆ.
41 ವರ್ಷದ ಲಿಯೋ ರಾಜಕಾರಣಿಯಾಗುವುದಕ್ಕೆ ಮೊದಲು 7 ವರ್ಷಗಳ ಕಾಲ ವೈದ್ಯರಾಗಿ ಸೇವೆ ಸಲ್ಲಿಸಿದ್ದರು. 2013ರಲ್ಲಿ ವೃತ್ತಿಗೆ ರಾಜೀನಾಮೆ ನೀಡಿದ ನಂತರ ವೈದ್ಯಕೀಯ ರಿಜಿಸ್ಟರ್ ನಿಂದ ಅವರ ಹೆಸರಿನಿಂದ ತೆಗೆಯಲಾಗಿತ್ತು. ಇದೀಗ ಕೊರೋನ ವೈರಸ್ ಜಗತ್ತಿನಾದ್ಯಂತ ಆತಂಕ ಸೃಷ್ಟಿಸಿರುವ ಕಾರಣ ಅವರು ಮತ್ತೊಮ್ಮೆ ವೈದ್ಯರಾಗಿ ಸೇವೆ ಸಲ್ಲಿಸಲು ಮುಂದೆ ಬಂದಿದ್ದಾರೆ.
ಲಿಯೋ ಅವರ ಕುಟುಂಬದಲ್ಲಿ ಹಲವರು ವೈದ್ಯಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
Next Story