ಇಟಲಿ: 24 ತಾಸುಗಳಲ್ಲಿ 525 ಬಲಿ
ಬ್ರುಸೆಲ್ಸ್,.ಎ.6:ಕಳೆದ ಮೂರು ವಾರಗಳಲ್ಲಿ ಕೊರೋನ ವೈರಸ್ನ ಅಟ್ಟಹಾಸದಿಂದ ದಿಗಿಲುಬಿದ್ದಿದ್ದ ಯುರೋಪ್ ರವಿವಾರ ತುಸು ಸಮಾಧಾನದ ನಿಟ್ಟುಸಿರುಬಿಟ್ಟಿದೆ. ಇಟಲಿಯಲ್ಲಿ ಕಳೆದ ಮೂರು ವಾರಗಳಲ್ಲಿಯೇ ರವಿವಾರ ಒಂದೇ ದಿನದಲ್ಲಿ ಅತ್ಯಂತ ಕಡಿಮೆ ಸಂಖ್ಯೆಯ ಸಾವುಗಳು ಸಂಭವಿಸಿವೆ. ಶನಿವಾರ ಹಾಗೂ ರವಿವಾರ ನಡುವಿನ 24 ತಾಸುಗಳ ಅಂತರದಲ್ಲಿ ಇಟಲಿಯಲ್ಲಿ 525 ಮಂದಿ ಕೊರೋನಾಗೆ ಬಲಿಯಾಗಿದ್ದು, ಇದು ಮಾರ್ಚ್ 16ರಿಂದೀಚೆಗೆ ಒಂದೇ ದಿನದಲ್ಲಿ ಸಂಭವಿಸಿದ ಅತ್ಯಂತ ಕನಿಷ್ಠ ಸಾವಿನ ಸಂಖ್ಯೆಯಾಗಿದೆ. ಮಾರ್ಚ್ 27ರಂದು ಒಂದೇ ದಿನದಲ್ಲಿ 969 ಮಂದಿ ಕೊರೋನಾಗೆ ಬಲಿಯಾಗಿದ್ದು, ಇದು ಅತ್ಯಂತ ಗರಿಷ್ಠವಾಗಿತ್ತು. ಆನಂತದ 9 ದಿನಗಳ ಪೈಕಿ ಐದು ದಿನಗಳಲ್ಲಿ ಸತತವಾಗಿ ಸಾವಿನ ಸಂಖ್ಯೆಯಲ್ಲಿ ಇಳಿಮುಖ ಕಂಡುಬಂದಿದೆ. ಈವರೆಗೆ ಇಟಲಿಯಲ್ಲಿ 15,997 ಮಂದಿ ಸಾವನ್ನಪ್ಪಿದ್ದು, ಇದು ಇತರ ಯಾವುದೇ ದೇಕ್ಕಿಂತಲೂ ಗರಿಷ್ಠವಾಗಿದೆ. ಆದಾಗ್ಯೂ, ಇಟಲಿಯಲ್ಲಿ ರವಿವಾರ ಸೋಕು ಪೀಡಿತರ ಸಂಖ್ಯೆಯು 91, 246ಕ್ಕೆ ಏರಿಕೆ.
Next Story