ನಾಳೆ ಕೋವಿಡ್-19 ಕುರಿತ ಮೊದಲ ಭದ್ರತಾ ಮಂಡಳಿ ಸಭೆ
ವಿಶ್ವಸಂಸ್ಥೆ, ಎ. 7: ಐವರು ಖಾಯಂ ಸದಸ್ಯರ ನಡುವಿನ ಭಿನ್ನಾಭಿಪ್ರಾಯದ ಬಳಿಕ, ಕೊರೋನವೈರಸ್ ಸಾಂಕ್ರಾಮಿಕ ರೋಗಕ್ಕೆ ಸಂಬಂಧಿಸಿದ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಮೊದಲ ಸಭೆಯು ಗುರುವಾರ ನಡೆಯಲಿದೆ.
ಕಳೆದ ವಾರ 10 ಖಾಯಂ ಅಲ್ಲದ ಸದಸ್ಯರ ಪೈಕಿ ಒಂಬತ್ತು ಸದಸ್ಯರು, ಸಭೆಯೊಂದನ್ನು ಏರ್ಪಡಿಸುವಂತೆ ಮನವಿ ಭದ್ರತಾ ಮಂಡಳಿಗೆ ಔಪಚಾರಿಕವಾಗಿ ಮನವಿ ಮಾಡಿದ್ದರು. ಈ ಸಭೆಯಲ್ಲಿ ವಿಶ್ವಸಂಸ್ಥೆಯ ಮಹಾಕಾರ್ಯದರ್ಶಿ ಆಂಟೋನಿಯೊ ಗುಟೆರಸ್ ಕೋವಿಡ್-19 ಪರಿಸ್ಥಿತಿಯ ಬಗ್ಗೆ ವಿವರಣೆಯನ್ನು ನೀಡಲಿದ್ದಾರೆ.
‘‘ಸಭೆಯು ಗುರುವಾರ ನಡೆಯುವುದು ಖಚಿತವಾಗಿದೆ’’ ಎಂದು ಓರ್ವ ರಾಜತಾಂತ್ರಿಕರು ಎಎಫ್ಪಿ ಸುದ್ದಿ ಸಂಸ್ಥೆಗೆ ತಿಳಿಸಿದರು. ಸಭೆಯು ಭಾರತೀಯ ಕಾಲಮಾನ ರಾತ್ರಿ 12:30ಕ್ಕೆ ಮುಚ್ಚಿದ ಬಾಗಿಲ ಹಿಂದೆ ನಡೆಯಲಿದೆ.
Next Story