ಕೊರೋನ ಪೀಡಿತ 2 ತಿಂಗಳ ಮಗು ಗುಣಮುಖ
ರೋಮ್ (ಇಟಲಿ), ಎ. 9: ಇಟಲಿಯಲ್ಲಿ ಎರಡು ತಿಂಗಳ ಶಿಶುವೊಂದು ನೂತನ-ಕೊರೋನವೈರಸ್ ಸೋಂಕಿನಿಂದ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ ಎಂದು ಮಾಧ್ಯಮಗಳು ಗುರುವಾರ ವರದಿ ಮಾಡಿವೆ. ಇದು ದೇಶದ ಅತಿ ಕಿರಿಯ ಕೋವಿಡ್-19 ರೋಗಿ ಎಂದು ನಂಬಲಾಗಿದೆ.
ಮಗುವಿನ ತಾಯಿ ಕೂಡ ನ್ಯುಮೋನಿಯದಿಂದ ಚೇತರಿಸಿಕೊಂಡಿದ್ದು, ಇಬ್ಬರನ್ನೂ ಬಿಡುಗಡೆ ಮಾಡಲಾಗಿದೆ. ತಾಯಿ ಮತ್ತು ಮಗುವನ್ನು ದಕ್ಷಿಣದ ನಗರ ಬರಿಯ ಆಸ್ಪತ್ರೆಯೊಂದಕ್ಕೆ ಮಾರ್ಚ್ 18ರಂದು ಸೇರಿಸಲಾಗಿತ್ತು.
ಇಟಲಿಯಲ್ಲಿ ಈವರೆಗೆ ಅಧಿಕೃತವಾಗಿ 17,669 ಮಂದಿ ಕೋವಿಡ್-19 ಕಾಯಿಲೆಯಿಂದಾಗಿ ಮೃತಪಟ್ಟಿದ್ದಾರೆ. ಕೊರೋನ ವೈರಸ್ ಸಾವಿನ ಸಂಖ್ಯೆಯಲ್ಲಿ ಇಟಲಿ ಅಗ್ರ ಸ್ಥಾನದಲ್ಲಿದೆ.
Next Story