ಕೋವಿಡ್-19 ವೈರಸ್ಗೆ ಅಮೆರಿಕದಲ್ಲಿ ಸಾವಿನ ಸಂಖ್ಯೆ 20,000ಕ್ಕೂ ಅಧಿಕ
ವಾಷಿಂಗ್ಟನ್, ಎ.12: ಅಮೆರಿಕದಲ್ಲಿ ಮಹಾಮಾರಿ ಕೊರೋನ ವೈರಸ್ಗೆ ಸಾವನ್ನಪ್ಪಿರುವ ಸಂಖ್ಯೆ 20ಸಾವಿರ ಗಡಿ ದಾಟಿದ್ದು, ವೈರಸ್ನ ಸಾವಿನ ಸಂಖ್ಯೆಯಲ್ಲಿ ಅಮೆರಿಕ ಮೈಲುಗಲ್ಲು ಕ್ರಮಿಸಿದೆ.
ಅಮೆರಿಕದಲ್ಲಿ ಈ ತನಕ ಕೊರೋನ ವೈರಸ್ಗೆ ಬಲಿಯಾದವರ ಸಂಖ್ಯೆ 20,506ಕ್ಕೆ ತಲುಪಿದೆ. ಕೊರೋನ ವೈರಸ್ಗೆ ವಿಶ್ವದಲ್ಲಿ ಅತ್ಯಂತ ಹೆಚ್ಚು ಬಲಿಯಾದವರ ಸಂಖ್ಯೆ ಅಮೆರಿಕದಿಂದ ವರದಿಯಾಗಿದೆ.
ಕೊರೋನವೈರಸ್ಗೆ ಅತ್ಯಂತ ಹೆಚ್ಚು ಬಾಧಿತವಾಗಿರುವ ಇಟಲಿಯಲ್ಲಿ ಈ ತನಕ ವೈರಸ್ಗೆ 19,468ಮಂದಿ ಸಾವನ್ನಪ್ಪಿದ್ದಾರೆ. ಪಶ್ಚಿಮ ಯುರೋಪ್ನಲ್ಲಿ ಒಂದಷ್ಟು ವಿಶ್ವಾಸ ಮೂಡಿದರೆ, ಅಮೆರಿಕದಲ್ಲಿ ಕೊರೋನ ವೈರಸ್ ಆರ್ಭಟ ಉತ್ತುಂಗಕ್ಕೆ ತಲುಪಿದೆ.
Next Story