ಸಿಂಗಾಪುರ: 59 ಭಾರತೀಯರಲ್ಲಿ ಕೊರೋನ ಸೋಂಕು
ಸಾಂದರ್ಭಿಕ ಚಿತ್ರ
ಸಿಂಗಾಪುರ, ಎ. 13: ಸಿಂಗಾಪುರದಲ್ಲಿ ಹೊಸದಾಗಿ 233 ಮಂದಿಯಲ್ಲಿ ನೂತನ-ಕೊರೋನ ವೈರಸ್ ಸೋಂಕು ಕಾಣಸಿಕೊಂಡಿದ್ದು, ಈ ಪೈಕಿ 59 ಮಂದಿ ಭಾರತೀಯರಾಗಿದ್ದಾರೆ.
ಇದರೊಂದಿಗೆ ದೇಶದಲ್ಲಿ ಕೋವಿಡ್-19 ರೋಗಿಗಳ ಒಟ್ಟು ಸಂಖ್ಯೆ 2,532ಕ್ಕೆ ಏರಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.
ಈಗ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯತ್ತಿರುವ 976 ಸೋಂಕಿತರ ಪೈಕಿ 31 ಮಂದಿಯ ಸ್ಥಿತಿ ಗಂಭೀರವಾಗಿದೆ ಹಾಗೂ ಅವರು ತೀವ್ರ ನಿಗಾ ಘಟಕಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸಿಂಗಾಪುರದಲ್ಲಿ ಈವರೆಗೆ 8 ಮಂದಿ ಕೊರೋನ ವೈರಸ್ಗೆ ಬಲಿಯಾಗಿದ್ದಾರೆ.
Next Story