ಹೆರಿಗೆ ಆಸ್ಪತ್ರೆಯ ಮೇಲೆ ಬಂದೂಕುಧಾರಿಗಳ ದಾಳಿ; ಶಿಶುಗಳು ಸೇರಿ 13 ಸಾವು
ಕಾಬೂಲ್, ಮೇ 12: ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ನಲ್ಲಿರುವ ಹೆರಿಗೆ ಆಸ್ಪತ್ರೆಯೊಂದರಲ್ಲಿ ಬಂದೂಕುಧಾರಿಗಳು ಮಂಗಳವಾರ ನಡೆಸಿದ ದಾಳಿಯಲ್ಲಿ ಎರಡು ಶಿಶುಗಳು ಸೇರಿದಂತೆ 13 ಮಂದಿ ಮೃತಪಟ್ಟಿದ್ದಾರೆ ಎಂದು ಆಂತರಿಕ ಸಚಿವಾಲಯದ ವಕ್ತಾರರೊಬ್ಬರು ತಿಳಿಸಿದ್ದಾರೆ.
ಮೃತರಲ್ಲಿ ತಾಯಂದಿರು ಮತ್ತು ನರ್ಸ್ಗಳು ಸೇರಿದ್ದಾರೆ ಎಂದು ವಕ್ತಾರ ತಾರಿಖ್ ಅರಿಯಾನ್ ತಿಳಿಸಿದರು.
ಬಳಿಕ ಗಂಟೆಗಳ ಕಾಲ ನಡೆದ ತೆರವು ಕಾರ್ಯಾಚರಣೆಯಲ್ಲಿ ಭದ್ರತಾ ಪಡೆಗಳು ಮೂವರು ವಿದೇಶೀಯರು ಸೇರಿದಂತೆ 100ಕ್ಕೂ ಅಧಿಕ ಮಂದಿಯನ್ನು ರಕ್ಷಿಸಿದ್ದಾರೆ.
Next Story