ಬೈಡನ್ರ ಪಚಾರ ತಂಡಕ್ಕೆ ಕನ್ನ ಹಾಕಲು ರಶ್ಯ ಬೆಂಬಲಿತರ ಯತ್ನ?
ವಾಶಿಂಗ್ಟನ್, ಸೆ. 10: ರಶ್ಯ ಸರಕಾರ ಬೆಂಬಲಿತರೆನ್ನಲಾದ ಕನ್ನಗಾರರು, ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೋ ಬೈಡನ್ರ ಪ್ರಮುಖ ಚುನಾವಣಾ ಪ್ರಚಾರ ಸಲಹಾ ಸಂಸ್ಥೆಯೊಂದಕ್ಕೆ ಕನ್ನ ಹಾಕಿದ್ದಾರೆ ಎಂಬುದಾಗಿ ಮೈಕ್ರೋಸಾಫ್ಟ್ ಕಾರ್ಪೊರೇಶನ್ ಇತ್ತೀಚೆಗೆ ಎಚ್ಚರಿಸಿದೆ.
ಬೈಡನ್ ಮತ್ತು ಇತರ ಪ್ರಮುಖ ಡೆಮಾಕ್ರಟಿಕರ ಪರವಾಗಿ ಕೆಲಸ ಮಾಡುತ್ತಿರುವ, ವಾಶಿಂಗ್ಟನ್ನಲ್ಲಿ ಪ್ರಧಾನ ಕಚೇರಿ ಹೊಂದಿರುವ ಪ್ರಚಾರ ತಂತ್ರಗಾರಿಕೆ ಮತ್ತು ಸಂವಹನ ಸಂಸ್ಥೆ ‘ಎಸ್ಕೆಡಿಕೆನಿಕರ್ಬೋಕರ್’ನ ಸಿಬ್ಬಂದಿಯನ್ನು ಗುರಿಯಾಗಿಸಿ ಎರಡು ತಿಂಗಳಿಂದ ಕನ್ನ ಹಾಕಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಆದರೆ, ಸಂಸ್ಥೆಯ ನೆಟ್ವರ್ಕ್ಗಳಿಗೆ ಪ್ರವೇಶ ಪಡೆಯುವಲ್ಲಿ ಹ್ಯಾಕರ್ಗಳು ವಿಫಲರಾಗಿದ್ದಾರೆ ಎಂದು ಸಂಸ್ಥೆಯ ವಕ್ತಾರರೊಬ್ಬರು ಹೇಳಿದ್ದಾರೆ. ‘‘ಸಂಸ್ಥೆಯ ನೆಟ್ವರ್ಕ್ಗಳನ್ನು ಅತ್ಯುತ್ತಮವಾಗಿ ರಕ್ಷಿಸಲಾಗುತ್ತಿದೆ. ಹಾಗಾಗಿ, ಅಲ್ಲಿ ಯಾವುದೇ ಬಿರುಕು ಉಂಟಾಗಿಲ್ಲ’’ ಎಂದು ಅವರು ಹೇಳಿದ್ದಾರೆ.
Next Story