ನ್ಯೂಜರ್ಸಿ ವಿವಿ ಸಮೀಪ ಗುಂಡು ಹಾರಾಟ: 2 ಸಾವು
ಟ್ರೆಂಟನ್ (ನ್ಯೂಜರ್ಸಿ), ಸೆ. 14: ಅವೆುರಿಕದ ನ್ಯೂಜರ್ಸಿ ರಾಜ್ಯದ ವಿಶ್ವವಿದ್ಯಾನಿಲಯವೊಂದರ ಸಮೀಪದ ನಡೆದ ಗುಂಡು ಹಾರಾಟದಲ್ಲಿ ಇಬ್ಬರು ಮೃತಪಟ್ಟಿದ್ದಾರೆ ಹಾಗೂ 6 ಮಂದಿ ಗಾಯಗೊಂಡಿದ್ದಾರೆ.
ನ್ಯೂಬ್ರನ್ಸ್ ವಿಕ್ ನ ಡೆಲಾಫೀಲ್ಡ್ ರಸ್ತೆಯಲ್ಲಿರುವ ರಟ್ಗರ್ಸ್ ವಿಶ್ವವಿದ್ಯಾನಿಲಯದ ಸಮೀಪ ರವಿವಾರ ಮುಂಜಾನೆ ಸುಮಾರು 1:30ಕ್ಕೆ ಗುಂಡು ಹಾರಾಟ ನಡೆದಿದೆ ಎಂದು ಹೇಳಿಕೆಯೊಂದರಲ್ಲಿ ರಟ್ಗರ್ಸ್ ಪೊಲೀಸರು ತಿಳಿಸಿದ್ದಾರೆ ಎಂದು ಕ್ಸಿನುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಗುಂಡು ಹಾರಾಟ ನಡೆದಾಗ ವಿಶ್ವವಿದ್ಯಾನಿಲಯ ಕಟ್ಟಡದಿಂದ ಹೊರಗೆ ಸಂತೋಷಕೂಟವೊಂದು ನಡೆಯುತ್ತಿತ್ತು. ಆಕ್ರಮಣಕಾರರು ಎಷ್ಟು ಮಂದಿ ಇದ್ದಾರೆ ಎನ್ನುವುದು ಗೊತ್ತಾಗಿಲ್ಲ ಎಂದು ಸ್ಥಳೀಯ ಅಧಿಕಾರಿಗಳು ಹೇಳಿದ್ದಾರೆ.
ಗುಂಡಿನ ದಾಳಿಯಿಂದ ಗಾಯಗೊಂಡಿದ್ದ ಆರು ಮಂದಿಯನ್ನು ಪೊಲೀಸರು ಸ್ಥಳೀಯ ಆಸ್ಪತ್ರೆಯೊಂದಕ್ಕೆ ದಾಖಲಿಸಿದರು. ಅಲ್ಲಿ ಇಬ್ಬರು ಪುರುಷ ಗಾಯಾಳುಗಳು ಮೃತಪಟ್ಟಿದ್ದಾರೆ ಎಂಬುದಾಗಿ ಘೋಷಿಸಲಾಯಿತು.
Next Story