ಭಾರತ ಮೂಲದ ಬ್ರಿಟನ್ ಯುನಿಸೆಫ್ ಮುಖ್ಯಸ್ಥ ರಾಜೀನಾಮೆ
ಫೋಟೊ ಕೃಪೆ: twimg.com
ಲಂಡನ್, ಸೆ. 25: ವಿಶ್ವಸಂಸ್ಥೆಯ ಮಕ್ಕಳ ನಿಧಿ (ಯುನಿಸೆಫ್)ಯ ಬ್ರಿಟನ್ ಘಟಕದ ಮುಖ್ಯಸ್ಥರಾಗಿರುವ ಭಾರತ ಮೂಲದ ಸಚ ದೇಶ್ಮುಖ್, ಅಧಿಕಾರ ವಹಿಸಿಕೊಂಡ ಕೆಲವೇ ದಿನಗಳಲ್ಲಿ ರಾಜೀನಾಮೆ ನೀಡಿದ್ದಾರೆ.
ಬ್ರಿಟನ್ ಯುನಿಸೆಫ್ ಘಟಕದ ಕಾರ್ಯಕಾರಿ ನಿರ್ದೇಶಕರಾಗಿ ಎಪ್ರಿಲ್ ತಿಂಗಳಲ್ಲಿ ಅಧಿಕಾರ ವಹಿಸಿಕೊಂಡಿರುವ ದೇಶ್ಮುಖ್, ಹಿರಿಯ ಅಧಿಕಾರಿಯೊಬ್ಬರ ವಿರುದ್ಧದ ಪೀಡನೆ ಆರೋಪಗಳ ಬೆನ್ನುಹತ್ತಿದ್ದರು ಎನ್ನಲಾಗಿದೆ.
ಬ್ರಿಟನ್ನ ಮಾಜಿ ಸಚಿವರೂ ಆಗಿರುವ ಡಗ್ಲಸ್ ಅಲೆಕ್ಸಾಂಡರ್ 2018ರಿಂದ ಯುನಿಸೆಫ್ ಬ್ರಿಟನ್ನ ಅಧ್ಯಕ್ಷರಾಗಿದ್ದಾರೆ. ಅವರ ವಿರುದ್ಧ ದಾಖಲಾಗಿರುವ ಪೀಡನೆ ಆರೋಪಗಳ ಬಗ್ಗೆ ತನಿಖೆ ನಡೆಯಬೇಕು ಎಂಬುದಾಗಿ ಸಚ ದೇಶ್ಮುಖ್ ಒತ್ತಾಯಿಸಿದ್ದರು ಎಂದು ’ದ ಥರ್ಡ್ ಸೆಕ್ಟರ್’ ಪತ್ರಿಕೆ ವರದಿ ಮಾಡಿದೆ.
Next Story