ಇಸ್ರೇಲ್: ನೆತನ್ಯಾಹು ರಾಜೀನಾಮೆಗೆ ಒತ್ತಾಯಿಸಿ ಬೃಹತ್ ಪ್ರತಿಭಟನೆ
ಜೆರುಸಲೇಮ್, ಸೆ. 27: ಇಸ್ರೇಲ್ನಲ್ಲಿ ಹೆಚ್ಚುತ್ತಿರುವ ಕೊರೋನ ವೈರಸ್ ಸೋಂಕು ಪ್ರಕರಣಗಳ ಸಂಖ್ಯೆಯನ್ನು ನಿಯಂತ್ರಿಸಲು ದೇಶದಲ್ಲಿ ಲಾಕ್ಡೌನ್ ನಿರ್ಬಂಧಗಳನ್ನು ಬಿಗಿಗೊಳಿಸಿದ ಒಂದು ದಿನದ ಬಳಿಕ, ಜೆರುಸಲೇಮ್ನಲ್ಲಿ ಸಾವಿರಾರು ಮಂದಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ವಿರುದ್ಧ ಪ್ರತಿಭಟನೆ ನಡೆಸಿದರು.
ಪ್ರತಿಭಟನಕಾರರು ಕಾರುಗಳಲ್ಲಿ ಸಂಚರಿಸಿ ನಗರದಲ್ಲಿ ವಾಹನ ಸಂಚಾರವನ್ನು ಅಸ್ತವ್ಯಸ್ತಗೊಳಿಸಿದರು. ಅದೇ ವೇಳೆ, ಪ್ರತಿಭಟನಕಾರರ ಸಣ್ಣ ಗುಂಪುಗಳು ದೇಶಾದ್ಯಂತ ಸೇತುವೆಗಳು ಮತ್ತು ಜಂಕ್ಷನ್ಗಳಲ್ಲಿ ಪ್ರತಿಭಟನೆ ನಡೆಸಿದರು.
ಟೆಲ್ಅವೀವ್ ಮತ್ತು ಸೀಸೇರಿಯ ನಗರಗಳಲ್ಲೂ ಪ್ರತಿಭಟನೆಗಳು ನಡೆದವು ಎಂದು ಇಸ್ರೇಲಿ ಮಾಧ್ಯಮಗಳು ವರದಿ ಮಾಡಿವೆ. ಪ್ರಧಾನಿ ನೆತನ್ಯಾಹು ರಾಜೀನಾಮೆ ನೀಡುವಂತೆ ಪ್ರತಿಭಟನಕಾರರು ಒತ್ತಾಯಿಸಿದರು.
Next Story