‘ಕೋವ್ಯಾಕ್ಸ್’ಗೆ ಮೆಕ್ಸಿಕೊದಿಂದ 1,167 ಕೋಟಿ ರೂ. ಪಾವತಿ
ಮೆಕ್ಸಿಕೊ ಸಿಟಿ, ಅ. 11: ವಿಶ್ವ ಆರೋಗ್ಯ ಸಂಸ್ಥೆಯ ‘ಕೋವ್ಯಾಕ್ಸ್’ ಎಂಬ ಕೊರೋನ ವೈರಸ್ ಲಸಿಕೆ ಯೋಜನೆಯನ್ವಯ ಲಸಿಕೆಗಳನ್ನು ಪಡೆಯುವುದಕ್ಕಾಗಿ ಸಂಸ್ಥೆಗೆ 159.88 ಮಿಲಿಯ ಡಾಲರ್ (ಸುಮಾರು 1,167 ಕೋಟಿ ರೂಪಾಯಿ) ಪಾವತಿಸಿರುವುದಾಗಿ ಮೆಕ್ಸಿಕೊ ಸರಕಾರ ಶನಿವಾರ ಘೋಷಿಸಿದೆ.
ವಿಶ್ವ ಆರೋಗ್ಯ ಸಂಸ್ಥೆಯ ಕೋವ್ಯಾಕ್ಸ್ ಯೋಜನೆಯು ಹಲವು ಸಂಭಾವ್ಯ ಲಸಿಕೆಗಳ ಪರೀಕ್ಷೆಗಳನ್ನು ನಡೆಸುತ್ತಿದೆ.
ಇದರಿಂದಾಗಿ ಸುಮಾರು 12.5 ಕೋಟಿ ಜನಸಂಖ್ಯೆ ಹೊಂದಿರುವ ಮೆಕ್ಸಿಕೊದ ಐದನೇ ಒಂದರಷ್ಟು ಜನರಿಗೆ ಬೇಕಾಗುವಷ್ಟು ಲಸಿಕೆಗಳು ಲಭಿಸಲಿವೆ.
Next Story