ಪರಮಾಣು ಶಸ್ತ್ರಗಳ ಸಂಖ್ಯೆ ಹೆಚ್ಚಿಸದಿರುವ ಒಪ್ಪಂದಕ್ಕೆ ಸಿದ್ಧ: ರಶ್ಯ
ಮಾಸ್ಕೋ (ರಶ್ಯ), ಅ. 20: ಅಮೆರಿಕ ಮತ್ತು ರಶ್ಯಗಳು ಹೊಂದಿರುವ ಪರಮಾಣು ಅಸ್ತ್ರಗಳ ಸಂಖ್ಯೆಯನ್ನು ಒಂದು ವರ್ಷದವರೆಗೆ ಅದೇ ಮಟ್ಟದಲ್ಲಿ ಕಾಯ್ದುಕೊಳ್ಳಲು ಅಮೆರಿಕದೊಂದಿಗೆ ಒಪ್ಪಂದ ಮಾಡಿಕೊಳ್ಳಲು ತಾನು ಸಿದ್ಧ ಎಂದು ರಶ್ಯ ಮಂಗಳವಾರ ಹೇಳಿದೆ.
ಮುಂದಿನ ವರ್ಷ ಕೊನೆಗೊಳ್ಳಲಿರುವ ಶಸ್ತ್ರಾಸ್ತ್ರ ಕಡಿತ ಒಪ್ಪಂದವನ್ನು ವಿಸ್ತರಿಸುವ ನಿಟ್ಟಿನಲ್ಲಿ ಈ ಒಪ್ಪಂದವನ್ನು ಮಾಡಿಕೊಳ್ಳಬಹುದಾಗಿದೆ ಎಂದು ಅದು ಹೇಳಿದೆ.
‘‘ಒಂದು ವರ್ಷದವರೆಗೆ ಅಮೆರಿಕ ಮತ್ತು ರಶ್ಯಗಳು ಹೊಂದಿರುವ ಪರಮಾಣು ಸಿಡಿತಲೆಗಳ ಸಂಖ್ಯೆಯನ್ನು ಹೆಚ್ಚಿಸದಿರಲು ಅಮೆರಿಕದೊಂದಿಗೆ ಒಪ್ಪಂದವೊಂದನ್ನು ಮಾಡಿಕೊಳ್ಳುವ ಮೂಲಕ ಹಳೆಯ ಒಪ್ಪಂದವನ್ನು ಒಂದು ವರ್ಷದವರೆಗೆ ವಿಸ್ತರಿಸಲು ರಶ್ಯ ಸಿದ್ಧವಿದೆ’’ ಎಂದು ವಿದೇಶ ಸಚಿವಾಲಯವು ಹೇಳಿಕೆಯೊಂದರಲ್ಲಿ ತಿಳಿಸಿದೆ.
Next Story