ಅಫ್ಘಾನ್ ವಾಯು ದಾಳಿಯಲ್ಲಿ ಮಕ್ಕಳು ಸೇರಿ 12 ಸಾವು
ಕಾಬೂಲ್ (ಅಫ್ಘಾನಿಸ್ತಾನ), ಅ. 22: ತಾಲಿಬಾನ್ ಭಯೋತ್ಪಾದಕರನ್ನು ಗುರಿಯಾಗಿಸಿ ಅಫ್ಘಾನ್ ಸೇನೆ ಬುಧವಾರ ಟಖರ್ ಪ್ರಾಂತದಲ್ಲಿ ನಡೆಸಿದ ವಾಯು ದಾಳಿಯಲ್ಲಿ ಮಕ್ಕಳು ಸೇರಿದಂತೆ ಕನಿಷ್ಠ 12 ಮಂದಿ ಮೃತಪಟ್ಟಿದ್ದಾರೆ ಹಾಗೂ 14 ಮಂದಿ ಗಾಯಗೊಂಡಿದ್ದಾರೆ. ಅಫ್ಘಾನಿಸ್ತಾನದ ಯುದ್ಧ ವಿಮಾನಗಳು ಒಂದು ಧಾರ್ಮಿಕ ಶಾಲೆ ಮತ್ತು ಮಸೀದಿಯೊಂದರ ಮೇಲೆ ಬಾಂಬ್ಗಳನ್ನು ಹಾಕಿದ್ದವು.
11 ಮಕ್ಕಳು ಮತ್ತು ಧಾರ್ಮಿಕ ನಾಯಕರೊಬ್ಬರು ದಾಳಿಯಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.
ಬುಧವಾರ ಸಂಜೆ ದಾಳಿ ನಡೆದಿರುವುದನ್ನು ಅಫ್ಘಾನ್ ಸೇನೆ ಖಚಿತಪಡಿಸಿದೆ. ಆದರೆ, ದಾಳಿಯು ಗುರಿ ತಪ್ಪಿತೆ ಎನ್ನುವುದು ಸ್ಪಷ್ಟವಾಗಿಲ್ಲ.
ಬುಧವಾರ ಬೆಳಗ್ಗೆ ತಾಲಿಬಾನ್ ಉಗ್ರರು ಅಫ್ಘಾನ್ ಭದ್ರತಾ ಸಿಬ್ಬಂದಿಯ ಮೇಲೆ ದಾಳಿ ನಡೆಸಿದ 40 ಸೈನಿಕರನ್ನು ಕೊಂದಿದ್ದರು.
Next Story