ಕೆನಡಾ: ಚಾಕು ಇರಿತಕ್ಕೆ ಇಬ್ಬರು ಮೃತ, ಐವರಿಗೆ ಗಾಯ, ಶಂಕಿತನ ಬಂಧನ
ಟೊರೊಂಟೊ(ಕೆನಡಾ): ಕೆನಡಾದ ನಗರವಾದ ಕ್ವಿಬೆಕ್ ನಲ್ಲಿ ಚಾಕು ಇರಿತದ ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ ಹಾಗೂ 5 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಅನೇಕ ಜನರನ್ನು ಚಾಕುವಿನಿಂದ ಇರಿದಿರುವ ಶಂಕಿತ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕ್ವಿಬೆಕ್ ನಗರದ ಪೊಲೀಸ್ ಪಡೆ ಒಬ್ಬ ಶಂಕಿತನನ್ನು ಬಂಧಿಸಿದೆ. ತನಿಖೆ ಇನ್ನೂ ಮುಂದುವರಿರುವ ಕಾರಣ ನಗರದ ನಿವಾಸಿಗಳು ಬಾಗಿಲುಗಳನ್ನು ಲಾಕ್ ಮಾಡಿಕೊಂಡು ಒಳಗೆ ಇರಬೇಕೆಂದು ವಿನಂತಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಪಡೆ ಟ್ವಿಟರ್ ನಲ್ಲಿತಿಳಿಸಿದೆ
Next Story