ಟ್ರಂಪ್ರಿಂದ ಸಾರಾಸಗಟು ಅಧಿಕಾರ ದುರುಪಯೋಗ: ಅಂತರ್ರಾಷ್ಟ್ರೀಯ ವೀಕ್ಷಣಾ ತಂಡದ ಮುಖ್ಯಸ್ಥ ಆರೋಪ
ಬರ್ಲಿನ್ (ಜರ್ಮನಿ), ನ. 6: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತನ್ನ ಅಧಿಕಾರವನ್ನು ಸಾರಾಸಗಟಾಗಿ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ವೀಕ್ಷಣೆಗಾಗಿ ನಿಯೋಜಿಸಲ್ಪಟ್ಟ ಅಂತರ್ರಾಷ್ಟ್ರೀಯ ವೀಕ್ಷಕ ತಂಡದ ಮುಖ್ಯಸ್ಥ ಮೈಕಲ್ ಲಿಂಕ್ ಆರೋಪಿಸಿದ್ದಾರೆ.
ಅಧ್ಯಕ್ಷೀಯ ಚುನಾವಣೆಯಲ್ಲಿ ಪ್ರತಿಪಕ್ಷ ಡೆಮಾಕ್ರಟಿಕ್ ಪಕ್ಷವು ನನ್ನನ್ನು ವಂಚಿಸುತ್ತಿದೆ ಹಾಗೂ ಅವರು ನನ್ನಿಂದ ಅಧ್ಯಕ್ಷ ಹುದ್ದೆಯನ್ನು ಕದಿಯುತ್ತಿದ್ದಾರೆ ಎಂಬುದಾಗಿ ಟ್ರಂಪ್ ಆರೋಪಿಸಿದ ಬಳಿಕ ಅವರು ಈ ಹೇಳಿಕೆ ನೀಡಿದ್ದಾರೆ.
‘‘ಎಲ್ಲ ಅಧಿಕಾರಗಳನ್ನು ಹೊಂದಿರುವ ಹಾಗೂ ಅಮೆರಿಕ ಸೇನೆಯ ಮುಖ್ಯಸ್ಥರಾಗಿರುವ ಅಧ್ಯಕ್ಷರು ತಾನು ಗೆದ್ದಿದ್ದೇನೆ ಎಂದು ಭಾವಿಸಿ ಮತ ಎಣಿಕೆಯನ್ನು ನಿಲ್ಲಿಸುವಂತೆ ಒತ್ತಾಯಿಸುವುದು ಅತ್ಯಂತ ಆಘಾತಕಾರಿ ಸಂಗತಿಯಾಗಿದೆ’’ ಎಂದು ಜರ್ಮನಿಯ ದೈನಿಕ ‘ಸ್ಟಟ್ಗರ್ಟರ್ ಝೀಟಂಗ್’ಗೆ ನೀಡಿದ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
Next Story