ಸಿಬ್ಬಂದಿ ಮುಖ್ಯಸ್ಥನಾಗಿ ರಾನ್ ಕ್ಲೇನ್ರನ್ನು ನೇಮಿಸಿದ ಬೈಡನ್
ವಾಶಿಂಗ್ಟನ್, ನ. 12: ನನ್ನ ಸಿಬ್ಬಂದಿ ಮುಖ್ಯಸ್ಥನಾಗಿ ಅನುಭವಿ ಡೆಮಾಕ್ರಟಿಕ್ ಕಾರ್ಯಕರ್ತ ರಾನ್ ಕ್ಲೇನ್ರನ್ನು ಆರಿಸಿರುವುದಾಗಿ ಅಮೆರಿಕದ ನಿಯೋಜಿತ ಅಧ್ಯಕ್ಷ ಜೋ ಬೈಡನ್ ಬುಧವಾರ ಘೋಷಿಸಿದ್ದಾರೆ. ರಾನ್ ಕ್ಲೇನ್, ಬೈಡನ್ ಘೋಷಿಸಿದ ಮೊದಲ ಶ್ವೇತಭವನ ಸಿಬ್ಬಂದಿಯಾಗಿದ್ದಾರೆ.
‘‘ರಾನ್ ಮತ್ತು ನಾನು ಹಲವು ವರ್ಷಗಳಿಂದ ಜೊತೆಯಾಗಿ ಕೆಲಸ ಮಾಡಿದ್ದೇವೆ. ಅವರ ಮೌಲ್ಯ ಅಪಾರವಾಗಿದೆ’’ ಎಂದು ಹೇಳಿಕೆಯೊಂದರಲ್ಲಿ ಬೈಡನ್ ತಿಳಿಸಿದರು.
ಬೈಡನ್ 2009ರಲ್ಲಿ ಉಪಾಧ್ಯಕ್ಷರಾದಾಗಲೂ ರಾನ್ರನ್ನೇ ತನ್ನ ಸಿಬ್ಬಂದಿ ಮುಖ್ಯಸ್ಥರಾಗಿ ನೇಮಿಸಿದ್ದರು..
Next Story