ಚೀನಾದಲ್ಲಿ ಕೊರೋನವೈರಸ್ ಪ್ರಕರಣ ಪತ್ತೆಯಾಗಿ ಒಂದು ವರ್ಷ ಪೂರ್ಣ
ಹೊಸದಿಲ್ಲಿ: ಚೀನಾದ ವುಹಾನ್ ನಲ್ಲಿ ಕೊರೋನ ವೈರಸ್ ನ ಮೊದಲ ಪ್ರಕರಣ ಪತ್ತೆಯಾಗಿ ನವೆಂಬರ್ 17ನೇ ತಾರೀಖಿಗೆ ಒಂದು ವರ್ಷ ಪೂರ್ಣವಾಗಿದೆ.
ಚೀನಾದ ಹುಬೈ ಪ್ರಾಂತ್ಯದ 55 ರ ವಯಸ್ಸಿನ ವ್ಯಕ್ತಿಗೆ ಮೊದಲ ಬಾರಿ ವೈರಸ್ ಸೋಂಕು ತಗಲಿತ್ತು. ಈ ಪ್ರಕರಣವು ನವೆಂಬರ್ 17,2019ರಲ್ಲಿ ದಾಖಲಾಗಿದೆ ಎಂದು ದಕ್ಷಿಣ ಚೀನಾ ಮಾರ್ನಿಂಗ್ ಪೋಸ್ಟ್ ವರದಿ ಮಾಡಿದೆ.
ನವೆಂಬರ್ 17ರ ಬಳಿಕ ಪ್ರತಿದಿನ ಒಂದರಿಂದ ಐದು ಪ್ರಕರಣಗಳು ವರದಿಯಾಗಿದ್ದು,ಡಿಸೆಂಬರ್ 15ಕ್ಕೆ ಒಟ್ಟು ಪ್ರಕರಣಗಳ ಸಂಖ್ಯೆಯು 27ಕ್ಕೆ ತಲುಪಿತ್ತು ಎನ್ನುವುದನ್ನು ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ.
Next Story