ಮರು ಮತ ಎಣಿಕೆಯಿಂದ ಫಲಿತಾಂಶ ಬದಲಾಗದು: ಜಾರ್ಜಿಯ ಚುನಾವಣಾ ಅಧಿಕಾರಿಗಳು
ವಾಶಿಂಗ್ಟನ್, ನ. 19: ಮರು ಮತ ಎಣಿಕೆಯು ನಿಯೋಜಿತ ಅಧ್ಯಕ್ಷ ಜೋ ಬೈಡನ್ ರಾಜ್ಯದಲ್ಲಿ ಗಳಿಸಿದ ವಿಜಯವನ್ನು ಬದಲಿಸಲಾರದು ಎಂದು ಅವೆುರಿಕದ ಜಾರ್ಜಿಯ ರಾಜ್ಯದ ಚುನಾವಣಾ ಅಧಿಕಾರಿಗಳು ಬುಧವಾರ ಹೇಳಿದ್ದಾರೆ. ಇದರೊಂದಿಗೆ ಅಧಿಕಾರಕ್ಕೆ ಅಂಟಿಕೊಳ್ಳುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್ರ ಪ್ರಯತ್ನಗಳು ದಿನದಿಂದ ದಿನಕ್ಕೆ ದುರ್ಬಲಗೊಳ್ಳುತ್ತಿರುವಂತೆ ಕಂಡುಬರುತ್ತಿದೆ.
ಟ್ರಂಪ್ ಚುನಾವಣಾ ಪ್ರಚಾರ ತಂಡದ ಕೋರಿಕೆಯಂತೆ ಜಾರ್ಜಿಯ ಸೇರಿದಂತೆ ಹಲವು ರಾಜ್ಯಗಳಲ್ಲಿ ಮತಗಳ ಮರು ಎಣಿಕೆ ನಡೆಯುತ್ತಿದೆ. ಆದರೆ, ಇಷ್ಟರವರೆಗೆ ಟ್ರಂಪ್ ಬಣಕ್ಕೆ ಯಾವುದೇ ಯಶಸ್ಸು ಲಭಿಸಿಲ್ಲ.
ರಾಜ್ಯದಲ್ಲಿ ಬೈಡನ್ ಗಳಿಸಿರುವ 14,000 ಮತಗಳ ಮುನ್ನಡೆಯನ್ನು ಮರು ಎಣಿಕೆಯು ಬದಲಿಸುವ ಸಾಧ್ಯತೆಗಳಿಲ್ಲ ಎಂದು ಚುನಾವಣಾ ಅಧಿಕಾರಿಗಳು ಹೇಳಿದ್ದಾರೆ. ಮರು ಮತ ಎಣಿಕೆಯ ಫಲಿತಾಂಶ ಅಮೆರಿಕ ಕಾಲಮಾನ ಗುರುವಾರ ಹೊರಬೀಳಲಿದೆ.
Next Story