ಆ್ಯಂಜೆಲಾ ಮರ್ಕೆಲ್ ಕಚೇರಿ ಕಟ್ಟಡಕ್ಕೆ ಕಾರು ಢಿಕ್ಕಿ
ಬರ್ಲಿನ್ (ಜರ್ಮನಿ), ನ. 25: ಜರ್ಮನಿಯ ಚಾನ್ಸಲರ್ ಆ್ಯಂಜೆಲಾ ಮರ್ಕೆಲ್ರ ಕಚೇರಿಯಿರುವ ಕಟ್ಟಡದ ಮುಂಭಾಗದ ದ್ವಾರಕ್ಕೆ ಬುಧವಾರ ಬೆಳಗ್ಗೆ ಕಾರೊಂದು ಢಿಕ್ಕಿ ಹೊಡಿದಿದ್ದು, ಕಟ್ಟಡಕ್ಕೆ ಅಲ್ಪ ಹಾನಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಾರಿನ ಚಾಲಕನನ್ನು ಬಂಧಿಸಲಾಗಿದೆ. ರಾಜಧಾನಿ ಬರ್ಲಿನ್ನಲ್ಲಿರುವ ಚಾನ್ಸಲರ್ ಕಟ್ಟಡಕ್ಕೆ ಕಾರು ಬೆಳಗ್ಗೆ ಸುಮಾರು 10 ಗಂಟೆಗೆ ಗುದ್ದಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
‘‘ಮಕ್ಕಳು ಮತ್ತು ವೃದ್ಧರ ಹಂತಕರನ್ನು ನೀವು ಏನು ಮಾಡಿದಿರಿ?’’ ಎಂಬ ಘೋಷಣೆಯನ್ನು ಕಾರಿನಲ್ಲಿ ಬಿಳಿ ಪೇಂಟ್ನಿಂದ ಬರೆಯಲಾಗಿದೆ. ಕಾರಿನ ಇನ್ನೊಂದು ಬದಿಯಲ್ಲಿ ‘‘ಜಾಗತೀಕರಣ ನೀತಿಗಳನ್ನು ನಿಲ್ಲಿಸಿ’’ ಎಂಬುದಾಗಿ ಬರೆಯಲಾಗಿದೆ.
Next Story