ವಿಭಜನೆಯ ಕಾಲ ಕೊನೆಗೊಳ್ಳಲಿ: ಬೈಡನ್ರಿಂದ ‘ಥ್ಯಾಂಕ್ಸ್ಗಿವಿಂಗ್’ ಸಂದೇಶ
ವಿಲ್ಮಿಂಗ್ಟನ್ (ಅವೆುರಿಕ), ನ. 26: ‘ವಿಭಜನೆಯ ಕಠಿಣ ಕಾಲ’ ಶೀಘ್ರ ಕೊನೆಗೊಳ್ಳಬೇಕೆಂದು ಅಮೆರಿಕದ ನಿಯೋಜಿತ ಅಧ್ಯಕ್ಷ ಜೋ ಬೈಡನ್ ಬುಧವಾರ ‘ಥ್ಯಾಂಕ್ಸ್ಗಿವಿಂಗ್ ದಿನ’ದ ಸಂದರ್ಭದಲ್ಲಿ ನೀಡಿದ ಸಂದೇಶದಲ್ಲಿ ಕರೆ ನೀಡಿದ್ದಾರೆ.
‘‘ವಿಭಜನೆ, ಇನ್ನೊಬ್ಬರನ್ನು ಕೆಟ್ಟದಾಗಿ ಬಿಂಬಿಸುವ ಪ್ರವೃತ್ತಿಯ ಈ ಕಠಿಣ ಅವಧಿಯು ಕೊನೆಗೊಂಡು ಬೆಳಕಿನ ದಿನಗಳು ಬರಲಿ ಎಂದು ನಾನು ಹಾರೈಸುತ್ತೇನೆ’’ ಎಂದು ಡೆಲಾವೇರ್ ರಾಜ್ಯದಲ್ಲಿರುವ ತನ್ನ ತವರು ನಗರ ವಿಲ್ಮಿಂಗ್ಟನ್ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಹೇಳಿದರು.
Next Story