ಫ್ರಾನ್ಸ್ನ ಮಾಜಿ ಅಧ್ಯಕ್ಷ ಕೊರೋನ ವೈರಸ್ಗೆ ಬಲಿ
ಪ್ಯಾರಿಸ್ (ಫ್ರಾನ್ಸ್), ಡಿ. 3: ಫ್ರಾನ್ಸ್ ದೇಶವನ್ನು ಆಧುನಿಕ ಶಕೆಯತ್ತ ಹಾಗೂ ಐರೋಪ್ಯ ಒಕ್ಕೂಟದ ದಾರಿಯಲ್ಲಿ ಮುನ್ನಡೆಸಿದ ಅಧ್ಯಕ್ಷ ವಲೇರಿ ಗಿಸ್ಕಾರ್ಡ್ ಡಿ’ಎಸ್ಟೇಂಗ್ ಬುಧವಾರ ಕೋವಿಡ್-19 ಸಾಂಕ್ರಾಮಿಕದಿಂದಾಗಿ ನಿಧನರಾಗಿದ್ದಾರೆ ಎಂದು ಅವರ ಕುಟುಂಬ ತಿಳಿಸಿದೆ. ಅವರಿಗೆ 94 ವರ್ಷ ವಯಸ್ಸಾಗಿತ್ತು.
ಅವರು ಕಳೆದ ಹಲವು ತಿಂಗಳುಗಳಲ್ಲಿ ಹಲವು ಬಾರಿ ಹೃದಯದ ಸಮಸ್ಯೆಗೆ ಒಳಗಾಗಿ ಆಸ್ಪತ್ರೆಯಲ್ಲಿದ್ದರು. ಅವರು ಬುಧವಾರ ಲಾಯಿರ್ನಲ್ಲಿರುವ ಕೌಟುಂಬಿಕ ಮನೆಯಲ್ಲಿ ಕೊನೆಯುಸಿರೆಳೆದರು.
48 ವರ್ಷದ ಗಿಸ್ಕಾರ್ಡ್ 1974ರಲ್ಲಿ ದೇಶದ ಸಾರ್ವಕಾಲಿಕ ಅತಿ ಕಿರಿಯ ಅಧ್ಯಕ್ಷರಾದರು. 1981ರಲ್ಲಿ ನಡೆದ ಚುನಾವಣೆಯಲ್ಲಿ ಅವರು ಪರಾಜಯ ಅನುಭವಿಸಿದರು.
Next Story