ಇರಾನ್ಗೆ ದ. ಕೊರಿಯ ನಿಯೋಗ
ಈ ನಡುವೆ, ಇರಾನ್ ಪಡೆಗಳು ಗಲ್ಫ್ ಸಮುದ್ರದಲ್ಲಿ ವಶಪಡಿಸಿಕೊಂಡಿರುವ ತನ್ನ ತೈಲ ಟ್ಯಾಂಕರನ್ನು ಬಿಡುಗಡೆಗೊಳಿಸುವುದಕ್ಕಾಗಿ ದಕ್ಷಿಣ ಕೊರಿಯವು ಇರಾನ್ಗೆ ನಿಯೋಗವೊಂದನ್ನು ಕಳುಹಿಸಲಿದೆ.ದಕ್ಷಿಣ ಕೊರಿಯದ ಉಪ ವಿದೇಶ ಸಚಿವ ಚೊಯಿ ಜೊಂಗ್ ಕುನ್ ರವಿವಾರ ಇರಾನ್ಗೆ ಭೇಟಿ ನೀಡುವುದು ಈಗಾಗಲೇ ನಿಗದಿಯಾಗಿದೆ. ಹಡಗು ಬಿಡುಗಡೆಯ ಬಗ್ಗೆ ಮಾತುಕತೆ ನಡೆಸುವುದಕ್ಕಾಗಿ ಪ್ರತ್ಯೇಕ ನಿಯೋಗವೊಂದನ್ನು ಅವರ ಜೊತೆಗೆ ಕಳುಹಿಸಲಾಗುವುದು ಎಂದು ದಕ್ಷಿಣ ಕೊರಿಯದ ವಿದೇಶ ಸಚಿವಾಲಯದ ವಕ್ತಾರ ಚೊಯಿ ಯೋಂಗ್-ಸಾಮ್ ಮಂಗಳವಾರ ಸಿಯೋಲ್ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ಹೇಳಿದರು.
Next Story